ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ! ಸದ್ಯ ಡ್ರಾ ಆಯ್ತಲ್ಲ ಎಂದ ಇಂಗ್ಲೆಂಡ್ ಲಯನ್ಸ್

By Mahesh
|
Google Oneindia Kannada News

ಗಡ್ನಸ್ಕ್, ಜೂ.12: ಡಿಫೆಂಡರ್ ಜೊಲೆನ್ ಲೆಸ್ಕಾಟ್ ಹೊಡೆದ ಏಕೈಕ ಗೋಲಿನ ಸಹಾಯದಿಂದ ಪಂದ್ಯ ಉಳಿಸಿಕೊಂಡ ಸಮಾಧಾನದಲ್ಲಿ ಇಂಗ್ಲೆಂಡ್ ತಂಡವಿದ್ದರೆ, ಸಿಕ್ಕ ಅವಕಾಶ ಕೈ ತಪ್ಪಿಸಿಕೊಂಡು ಗೆಲ್ಲುವ ಪಂದ್ಯವನ್ನು ಡ್ರಾ ಮಾಡಿಕೊಂಡ ದುಃಖದಲ್ಲಿ ಫ್ರಾನ್ಸ್ ತಂಡ ಮುಳುಗಿದೆ. ಫ್ರೆಂಚರಿಗೆ ಸಮಿರ್ ನಸ್ರಿ ಹೊಡೆದ ಗೋಲು ಪಂದ್ಯ ಡ್ರಾ ಮಾಡಿಕೊಳ್ಳಲು ಸಹಾಯ ಮಾಡಿದೆ.

ಪಂದ್ಯದ ಮೊದಲಾರ್ಧದಲ್ಲಿ 30ನೇ ನಿಮಿಷದಲ್ಲಿ ಇಂಗ್ಲೆಂಡ್ ನಾಯಕ ಸ್ಟೀವನ್ ಜೆರಾಡ್ ಹೊಡೆದ ಫ್ರೀ ಕಿಕ್ ಅನ್ನು ಹೆಡ್ ಮಾಡುವ ಮೂಲಕ ಲೆಸ್ಕಾಟ್ ಗೋಲು ಗಳಿಸಿದರು.

ಇದಾದ 4 ನಿಮಿಷದಲ್ಲೇ ಸಮಿರ್ ನಸ್ರಿ ಇಬ್ಬರು ಇಂಗ್ಲೀಷ್ ಡಿಫೆಂಡರ್ಸ್ ಮಧ್ಯೆ ಚೆಂಡು ತೂರಿಸಿ ಅದ್ಭುತ ಗೋಲು ಬಾರಿಸಿದರು. ಮ್ಯಾಂಚೆಸ್ಟರ್ ಸಿಟಿ ಪರ ಆಡುವ ನಸ್ರಿ 20 ಯಾರ್ಡ್ ದೂರದಿಂದ ಹೊಡೆದ ಗೋಲಿನ ನಂತರ ಮೊದಲಾರ್ಧದ ಕೊನೆಯಲ್ಲಿ ಸ್ಟಾರ್ ಸ್ಟ್ರೈಕರ್ ಬೆನ್ಜಿಮಾ ಉತ್ತಮ ಕಿಕ್ ಮೂಲಕ ಗೋಲು ಹೊಡೆಯಲು ಯತ್ನಿಸಿ ವಿಫಲರಾದರು.

ಇಂಗ್ಲೆಂಡ್ ಗೋಲ್ ಕೀಪರ್ ಜೋ ಹಾರ್ಟ್ ಹಾಗೂ ನಾಯಕ ಜೆರಾಡ್ ಉತ್ತಮ ಆಟ ಪ್ರದರ್ಶಿಸಿ ಇಂಗ್ಲೆಂಡ್ ಮಾನ ಉಳಿಸಿದರು. ಪಂದ್ಯದುದ್ದಕ್ಕೂ ಫ್ರಾನ್ಸ್ ತಂಡ ಉತ್ತಮ ಪಾಸ್ ಗಳ ಮೂಲಕ ಇಂಗ್ಲೆಂಡ್ ರಕ್ಷಣಾ ಪಡೆಯನ್ನು ಕಾಡಿದರು.

ಇಂಗ್ಲೆಂಡ್ ತನ್ನ ಮುಂದಿನ ಪಂದ್ಯವನ್ನು ಸ್ವೀಡನ್ ವಿರುದ್ಧ ಆಡಲಿದೆ. ಫ್ರಾನ್ ತಂಡ ಉಕ್ರೇನ್ ವಿರುದ್ಧ ಸೆಣಸಲಿದೆ.

ಫ್ರಾನ್ಸ್ 1 - 1 ಇಂಗ್ಲೆಂಡ್
15(4) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 2(1)
11 ಕಾರ್ನರ್ಸ್ 4
9 ಫೌಲ್ಸ್ 7
0 ಆಫ್ ಸೈಡ್ 5
0 ಹಳದಿ ಕಾರ್ಡ್ 2
0 ಕೆಂಪು ಕಾರ್ಡ್ 0
English summary
Defender Joleon Lescott scored England's first goal at Euro 2012 and saves the day, but, France's Samir Nasri's equaliser denied victory to Englishmen on Monday(Jun.11) in Group D encounter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X