ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಬೆಂಬಲಿಗರಿಗೆ ಚುನಾವಣೆ ಟಿಕೆಟ್ ಕಷ್ಟ

By Mahesh
|
Google Oneindia Kannada News

Yeddyurappa aides
ಬೆಂಗಳೂರು, ಜೂ.4: ಮುಂದಿನ ಆರು ತಿಂಗಳಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ ಎಲ್ಲರೂ ಸಜ್ಜಾಗಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕರೆ ಕೊಟ್ಟಿದ್ದು ಬಿಜೆಪಿಯನ್ನು ಕೆರಳಿಸಿದೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪ ಬೆಂಬಲಿಗರಿಗೆ ಟಿಕೆಟ್ ನೀಡದಿರಲು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿದೆ ಎಂಬ ಸುದ್ದಿ ಹರಡಿದೆ.

ಬಿಎಸ್ ಯಡಿಯೂರಪ್ಪ ಅವರ ಆಪ್ತರಾಗಿರುವ ಸದ್ಯ ಡಿವಿ ಸದಾನಂದ ಗೌಡರ ಸಚಿವ ಸಂಪುಟದಲ್ಲಿರುವ 7 ಸಚಿವರು ಸೇರಿದಂತೆ 34 ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಕಷ್ಟ ಎನಿಸಿದೆ.

34 ವಿಧಾನಸಭಾ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳ ಶೋಧನಾ ಕಾರ್ಯ ಮುಗಿದಿದ್ದು ತತ್‌ಕ್ಷಣದಿಂದಲೇ ಕೆಲಸ ಆರಂಭಿಸುವಂತೆ ಬಿಜೆಪಿ ಹೈಕಮಾಂಡ್ ಮೌಖಿಕ ಸೂಚನೆಯನ್ನೂ ನೀಡಿದೆ ಎಂಬ ಸುದ್ದಿ ಬಂದಿದೆ.

ಕಪ್ಪು ಪಟ್ಟಿ ಸೇರಿದವರು: ಸಚಿವರಾದ ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಿಎಂ ಉದಾಸಿ, ಉಮೇಶ್ ಕತ್ತಿ, ಎಂಪಿ ರೇಣುಕಾಚಾರ್ಯ, ರೇವು ನಾಯಕ್ ಬೆಳಮಗಿ, ಏಳು ಸಚಿವರು ಸೇರಿದಂತೆ 34 ಶಾಸಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು ಅವರ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಭಾಗಿಯಾಗದಂತೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ಕಟ್ಟಳೆ ಜಾರಿಯಾಗಿದೆ.

ಸುರೇಶ್ ಗೌಡ, ಬಿಪಿ ಹರೀಶ್, ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ, ಮೂಡಿಗೆರೆಯ ಕುಮಾರಸ್ವಾಮಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕುಮಾರಸ್ವಾಮಿ, ಎಸ್ ಆರ್ ವಿಶ್ವನಾಥ್, ನಂದೀಶ್ ರೆಡ್ಡಿ, ವಾಲ್ಮೀಕಿ ನಾಯಕ್, ಸುನಿಲ್ ವಲ್ಯಾಪುರೆ, ದೊಡ್ಡನಗೌಡ ನರಬೋಳ, ಶಿವನಗೌಡ ನಾಯಕ್, ಕರಡಿ ಸಂಗಣ್ಣ, ಶ್ರೀ ಶೈಲಪ್ಪ ಬಿದರೂರು, ಪಾಟೀಲ್ ಸುರೇಶ್‌ಗೌಡ ಡಾ ವೈ ಸಿ ವಿಶ್ವನಾಥ್, ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ಸಂಜಯ ಪಾಟೀಲ್, ಹೇಮಚಂದ್ರ ಸಾಗರ್, ಡರ್ಟಿ ಪಿಕ್ಚರ್ ಖ್ಯಾತಿಯ ಮೂವರಾದ ಕೃಷ್ಣ ಜೆ ಪಾಲೆಮಾರ್, ಸಿಸಿ ಪಾಟೀಲ್, ಲಕ್ಷ್ಮಣ ಸವದಿ ಸೇರಿದಂತೆ 34 ಹಾಲಿ ಬಿಜೆಪಿ ಶಾಸಕರಿಗೆ ಗೇಟ್ ಪಾಸ್ ದೊರೆಯುವುದು ಬಹುತೇಕ ಖಚಿತವಾಗಿದೆ.

ಬಚಾವ್ ಸಾಧ್ಯವೇ?: ಯಡಿಯೂರಪ್ಪ ಪಕ್ಷ ಬಿಡಬಹುದು ಅಥವಾ ಪಕ್ಷವೇ ಅವರನ್ನು ಹೊರಗೆ ಹಾಕುವ ಸ್ಥಿತಿ ನಿರ್ಮಾಣವಾಗಬಹುದು ಎಂಬುದು ಖಚಿತ ಎನ್ನಲಾಗಿದೆ. ಆದರೆ, ಜೂನ್ ಮೊದಲ ವಾರ ಕರ್ನಾಟಕ ರಾಜ್ಯ ಪ್ರವಾಸದ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರಬಿದ್ದಿಲ್ಲ.

ರಾಜ್ಯ ಪ್ರವಾಸದ ಸಂದರ್ಭದಲ್ಲಿ ಯಡಿಯೂರಪ್ಪ ತಮ್ಮ ಮುಂದಿನ ನಡೆ ಬಗ್ಗೆ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಯಡಿಯೂರಪ್ಪ ಬೆಂಬಲಿಗರು ಕೂಡಾ ಯಾವುದೇ ಸುದ್ದಿ ಹೊರ ಹಾಕಿಲ್ಲದಿರುವುದು ಕುತೂಹಲಕಾರಿಯಾಗಿದೆ.

ಬಿಜೆಪಿ ಯೋಜನೆ ಏನು?: ಯಡಿಯೂರಪ್ಪ ಯಾವುದೇ ನಿರ್ಧಾರ ಕೈಗೊಂಡರೂ ಅಥವಾ ಪಕ್ಷವೇ ನಿಷ್ಠುರ ಕ್ರಮಕ್ಕೆ ಮುಂದಾದರೂ ರಾಜ್ಯದಲ್ಲಿ ಬಿಜಿಪಿಗೆ ಯಾವುದೇ ರೀತಿಯ ನಷ್ಠವಾಗದಂತೆ ನೊಡಿಕೊಳ್ಳುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ. ಪಕ್ಷದ ಹಿರಿಯರಿಗೆ ಕೂಡಾ ಸೂಕ್ತ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ.

ಯಡಿಯೂರಪ್ಪ ಬೆಂಬಲಿಗರಿಗೆ ಟಿಕೆಟ್ ತಪ್ಪಿಸಿದರೂ ಜಗದೀಶ್ ಶೆಟ್ಟರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿ ಲಿಂಗಾಯಿತರಿಗೆ ಅನ್ಯಾಯ ಮಾಡಿಲ್ಲ
ಎಂಬ ಸಂದೇಶ ರವಾನಿಸಲು ತಂತ್ರ ರೂಪಿಸಲಾಗಿದೆ. ಏಕ ಕಾಲಕ್ಕೆ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರಿಗೆ ಸಕತ್ ಶಾಕ್ ಕಾದಿದೆ.

ಬೆಂಗಳೂರಿನ ಶಾಸಕರು ಕೂಡಾ ಆರ್ ಅಶೋಕ್ ಹಾಗೂ ಸದಾನಂದ ಗೌಡರ ರಕ್ಷಣೆ ಬಯಸಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಏನಾದರೂ ಸದಾನಂದ ಗೌಡರ ಸಂಪುಟ ವಿಸ್ತರಣೆ ನಂತರ ಎಲ್ಲವೂ ತಿಳಿಯಲಿದೆ. ಸಂಪುಟದಲ್ಲಿ ಯಾರಿಗೆ ಕೊಕ್ ಸಿಗಲಿದೆ. ಯಾರಿಗೆ ಸ್ಥಾನ ಸಿಗಲಿದೆ ಎಂಬುದರ ಮೇಲೆ ಯಡಿಯೂರಪ್ಪ ಬೆಂಬಲಿಗರ ಭವಿಷ್ಯ ಅಡಗಿದೆ.

English summary
BJP high command has decided to snub Yeddyurappa aides by not giving tickets for up coming assembly election. Election candidate likely to be decided after Sadananda Gowda's cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X