ರೆಡ್ಡಿಗೆ ಜಾಮೀನು ಕರುಣಿಸಿದ ಸಿಬಿಐ ಜಡ್ಜ್ ಸಸ್ಪೆಂಡ್

reddy-bail-cbi-judge-pattabhi-ramarao-suspended
ಹೈದರಾಬಾದ್, ಜೂನ್ 1: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಗಾಲಿ ಜನಾರ್ದನ ರೆಡ್ಡಿ ಅವರಿಂದ ಲಂಚ ಸ್ವೀಕರಿಸಿ, ಜಾಮೀನು ಭಾಗ್ಯ ಕರುಣಿಸಿದ ಆರೋಪದ ಮೇಲೆ ನ್ಯಾಯಾಧೀಶ ಪಟ್ಟಾಭಿ ರಾಮ ರಾವ್ ಅವರನ್ನು ಅಮಾನತು ಮಾಡಲಾಗಿದೆ. ಲಂಚ ಪಡೆದು ಆರೋಪಿಗೆ ಜಾಮೀನು ನೀಡಿದ ಆರೋಪದ ಮೇಲೆ ನ್ಯಾಯಾಧೀಶಯರನ್ನೇ ಅಮಾನತು ಮಾಡಿದ ಅಪರೂಪದ, ಆಘಾತಕಾರಿ ಪ್ರಕರಣ ಇದಾಗಿದೆ.

ನ್ಯಾಯಾಧೀಶ ಟಿ. ಪಟ್ಟಾಭಿ ರಾಮ ರಾವ್ ಅವರು ಇತ್ತೀಚೆಗಷ್ಟೇ ಸಿಬಿಐ ವಿಶೇಷ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. AP civil services (CC&A) Rules- 1991, Rule 8(1) ಅನುಸಾರ ಆಂಧ್ರ ಹೈಕೋರ್ಟ್ ನ್ಯಾಯಾಧೀಶ ಪಟ್ಟಾಭಿ ರಾಮ ರಾವ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿರ್ಧರಿಸಿದ್ದು, ಹೈದರಾಬಾದ್ ಬಿಟ್ಟು ತೆರಳದಂತೆ ಈಗಾಗಲೇ ರಾಮರಾವ್ ಗೆ ಆದೇಶಿಸಿದೆ.

ಅಕ್ರಮ ಗಣಿವೀರ ಗಾಲಿ ಜನಾರ್ದನ ರೆಡ್ಡಿ ನ್ಯಾಯಾಧೀಶರನ್ನೇ ತಮ್ಮ ಪ್ರಭಾವಕ್ಕೆ ಒಳಪಡಿಸಿ, ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ. ಇದೀಗ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ಕುತೂಹಲಕಾರಿ ತಿರುವು ಪಡೆದಿದ್ದು, ರೆಡ್ಡಿಗೆ ಸಿಬಿಐ ಉರುಳು ಮತ್ತಷ್ಟು ಬಿಗಿಯಾಗಲಿದೆ.

ಶತಾಯಗತಾಯ ರೆಡ್ಡಿಗೆ ಜಾಮೀನು ಸಿಗದಂತೆ ಸಿಬಿಐ ಜಂಟಿ ನಿರ್ದೇಶಕ, ಪ್ರಕರಣದ ತನಿಖಾಧಿಕಾರಿ ವಿವಿ ಲಕ್ಷ್ಮಿನಾರಾಯಣ ಅವರು ರೆಡ್ಡಿಯನ್ನು ಕಟ್ಟಿಹಾಕಿದ್ದರು. ಈ ಮಧ್ಯೆ, ನಾಂಪಲ್ಲಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಪ್ರಧಾನ ಜಡ್ಜ್ ಎ. ಪುಲ್ಲಯ್ಯ ಅವರಿಗೆ ಈಗ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

ಹೈದರಾಬಾದಿನ ನಾಂಪಲ್ಲಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ರಾಮರಾವ್ ಅವರು ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿರುವ ಸಿಬಿಐನ ಬಲವಾದ ಆಕ್ಷೇಪದ ಹೊರತಾಗಿಯೂ ಜನಾರ್ದನ ರೆಡ್ಡಿಗೆ ಜಾಮೀನು ದಯಪಾಲಿಸಿದ್ದರು. ಆಂಧ್ರ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಈ ಅಮಾನತ್ತು ಆದೇಶ ಹೊರಡಿಸಿದ್ದಾರೆ. ನ್ಯಾಯಾಧೀಶ ಪಟ್ಟಾಭಿ ರಾಮ ರಾವ್ ವಿರುದ್ಧ ಅಕ್ರಮಗಳ ಆರೋಪ ಹೊರಸಿ, ಗುರುವಾರ ಸಂಜೆ ಅಮಾನತು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ರೆಡ್ಡಿಗೆ ಜಾಮೀನು ಹೇಗೆ, ಯಾವಾಗ ನೀಡಲಾಗಿತ್ತು?: ಓಬಳಾಪುರಂ ಗಣಿ ಸಂಸ್ಥೆ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಎಂಡಿ ಶ್ರೀನಿವಾಸ್ ಅವರಿಗೆ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯ ಕಳೆದ ಮೇ 11 ರಂದು ಜಾಮೀನು ಮಂಜೂರು ಮಾಡಿತ್ತು. ಗಮನಾರ್ಹವೆಂದರೆ ಮತ್ತೊಂದು ಗಣಿ ಅಕ್ರಮ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಗಾಲಿ ರೆಡ್ಡಿಗೆ ಬಿಡುಗಡೆ ಭಾಗ್ಯ ಒದಗಿ ಬಂದಿರಲಿಲ್ಲ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಬೇಲ್ ನೀಡಿದ್ದ ನಾಂಪಲ್ಲಿ ಸಿಬಿಐ ನ್ಯಾಯಾಧೀಶ ರಾಮರಾವ್ ಅವರು 5 ಲಕ್ಷ ರೂಪಾಯಿ ಶ್ಯೂರಿಟಿ ಸಲ್ಲಿಸುವಂತೆ ಆದೇಶಿಸಿದ್ದರು. ಜತೆಗೆ, ದೇಶಬಿಟ್ಟು ಹೊರಗೆ ಹೋಗಬಾರದು ಎಂದೂ ಆದೇಶ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+