ಸಿದ್ದು ಎಫೆಕ್ಟ್: ರಾಹುಲ್ ಗಾಂಧಿ ಹುಬ್ಬಳ್ಳಿಗೆ ಬರ್ತಾರಾ?

siddaramaiah-resign-will-rahul-gandhi-visit-hubli
ಹುಬ್ಬಳ್ಳಿ, ಜೂನ್ 1: ರಾಜ್ಯ ವಿಧಾನ ಪರಿಷತ್ ಚುನಾವಣೆ ನೆಪದಲ್ಲಿ ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದೆ. ಗಮನಾರ್ಹವೆಂದರೆ ಹುಬ್ಬಳ್ಳಿಯಲ್ಲಿ ಪೂರ್ವನಿಗದಿಯಂತೆ 3 ದಿನಗಳ ಚಿಂತನ ಮಂಥನ ಕಾರ್ಯಾಗಾರ ನಡೆಸುತ್ತಿದೆ. ಗಮನಾರ್ಹವೆಂದರೆ ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ ಅವರು ಇಂದು ಕಾರ್ಯಾಗಾರದ ಎರಡನೆಯ ದಿನ ಹುಬ್ಬಳ್ಳಿಗೆ ಬರುವ ಕಾರ್ಯಕ್ರಮ ನಿಗದಿಯಾಗಿದೆ.

ಆದರೆ ಈ ಸಂದರ್ಭದಲ್ಲೇ ಕಾಮಗ್ರೆಸ್ಸಿನಲ್ಲಿ ದಿಢೀರ್ ಬೆಳವಣಿಗೆಗಳು, ಬಂಡಾಯಗಳು ಸ್ಫೋಟಿಸಿವೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರು ಪಕ್ಷದ ಮೂಲ ನಾಯಕರು ತಮ್ಮನ್ನು ಆರಂಭದಿಂದಲೂ ತುಳಿಯುತ್ತಿದ್ದಾರೆ. ಅವರಿಂದಾಗಿಯೇ ನಿನ್ನೆ ತಮ್ಮ ಬೆಂಬಲಿಗ ಇಬ್ರಾಹಿಂ ಅವರಿಗೆ ಮೇಲ್ಮನೆ ಚುನಾವಣೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಸೆಟೆದುಕೊಂಡ ಸಿದ್ದರಾಮಯ್ಯ ರಾಜೀನಾಮೆ ಒಗಾಯಿಸಿದ್ದಾರೆ.

ಹೀಗೆ ಛಿದ್ರಗೊಂಡಿರುವ ಪಕ್ಷವು ಇಂದು ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಬೇಕಾಗಿದೆ. ಈ ದಿಢೀರ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಸಲಿಗೆ ರಾಹುಲ್ ಗಾಂಧಿ ಅವರು ಹುಬ್ಬಳ್ಳಿ ಕಾರ್ಯಾಗಾರಕ್ಕೆ ಆಗಮಿಸುತ್ತಾರಾ ಎಂಬುದು ಸದ್ಯದ ಕುತೂಹಲವಾಗಿದೆ.

ನಿನ್ನೆಯಿಂದ ಆರಂಭವಾದ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡು, ಪರಾಮರ್ಶೆ ನಡೆಸಬೇಕಿದೆ. ಆದರೆ ಅಂತಿಮ ಕ್ಷಣದಲ್ಲಿ ಅವರು ಹುಬ್ಬಳ್ಳಿ ಭೇಟಿಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ ಎಂದು ಹಿರಿಯ ಕಾಂಗ್ರೆಸ್ಸಿಗರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ನೀತಿಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯನವರ ಬಂಡಾಯವನ್ನು ಕಡೆಗಣಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ರಾಜ್ಯ ಕಾಂಗ್ರೆಸ್ಸಿನ ಕೆಲವು ಹಿರಿಯ ನಾಯಕರು ಸಿದ್ದರಾಮಯ್ಯ ಆತುರದ ನಿರ್ಧಾರಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

ಸಿದ್ರಾಮಣ್ಣ ಹಿರಿಯ ನಾಯಕರು. ಭಾವಿ ಮುಖ್ಯಮಂತ್ರಿ ಅಭ್ಯರ್ಥಿ. ಅಂತಹವರು ಆತುರಕ್ಕೆ ಬಿದ್ದು ಕಾಂಗ್ರೆಸ್ ಗೆ ಗುಡ್ ಬೈ ಹೇಳುವುದು ವಿವೇಕದ ಕ್ರಮವಲ್ಲ. ಅವರೊಂದಿಗೆ ಖುದ್ದಾಗಿ ಮಾತನಾಡುವೆ ಎಂದು ಕಾಂಗ್ರೆಸ್ ಪಕ್ಷಷ ಮತ್ತೊಬ್ಬ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಅವರು TV9 ಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+