ಅಸಲಿಗೆ ಶಿಖಂಡಿ ಯಾರು ಗೊತ್ತಾ !?

ಶಿಖಂಡಿ ಮಹಾಭಾರತದಲ್ಲಿ ಕಾಣಿಸಿಕೊಳ್ಳುವ ಮಹತ್ವದ ಪಾತ್ರ. ಆದರೆ ಆ ಪಾತ್ರದ ಮೇಲೆ ಅಂದಿನಿಂದಲೂ ಇಲ್ಲ-ಸಲ್ಲದ ಆರೋಪಗಳನ್ನೇ ಹೊರಿಸಲಾಗಿದೆ. ಶಿಖಂಡಿ ಪಾತ್ರದ ಮೂಲ ವ್ಯಕ್ತಿಗೆ ವ್ಯತಿರಿಕ್ತವಾಗಿ ಜನಪದ ಆತನನ್ನು ವಿಚಿತ್ರವಾಗಿ, ವಿಕೃತವಾಗಿ ವರ್ಣಿಸಿ, ಸಂತೋಷಿಸುತ್ತಿದೆ.
ಶಿಖಂಡಿ ಹುಟ್ಟಾ ಸ್ತ್ರೀ ! ಆದರೆ ಹುಟ್ಟನ್ನು ಮರೆಮಾಚಿ ಅವಳನ್ನು ಒಬ್ಬ ಪುರುಷನನ್ನಾಗಿ ಬೆಳೆಸಲಾಯಿತು. ಮತ್ತು ಇದನ್ನು ಆ ಸಾಮ್ರಾಜ್ಯದಲ್ಲಿ ಅತ್ಯಂತ ಗೌಪ್ಯವಾಗಿಡಲಾಗಿತ್ತು. ಯಾರೆಂದರೆ ಯಾರಿಗೂ ಆ ಪಾತ್ರಧಾರಿ ಒಬ್ಬ ಮಹಿಳೆ ಎಂಬುದನ್ನು ತಿಳಿಯದ ಹಾಗೆ ರಹಸ್ಯ ಕಾಪಾಡಲಾಗಿತ್ತು.
ಪರಿಸ್ಥಿತಿಯ ವ್ಯಂಗ್ಯವೋ, ಅಥವಾ ವಿಧಿ ಲಿಖಿತವೋ ಪುರುಷ ರೂಪದಲ್ಲಿದ್ದ ಯುವತಿಯನ್ನು ಪಕ್ಕದ ರಾಜ್ಯದ ರಾಜಕುಮಾರಿಗೆ ನೀಡಿ, ವಿವಾಹ ಮಾಡಲಾಯಿತು. ಕಾಲಾಂತರದಲ್ಲಿ ವಧುವಿಗೆ (ರಾಜಕುಮಾರಿ) ನಿಜ ಏನೆಂಬುದು ಗೊತ್ತಾಗುತ್ತದೆ. ರಾಜಕುಮಾರಿ ಮಾದುವೆಯಾಗಿರುವುದು ಪುರುಷ ರೂಪದಲ್ಲಿದ್ದ ಯುವತಿಯನ್ನು ಎಂಬುದು ಬಹಿರಂಗವಾಗುತ್ತದೆ. ಮತ್ತು ಆ ಕಹಿಸತ್ಯವು ಹೆಣ್ಣು ಕೊಟ್ಟ ತಂದೆ ಹಿರಣ್ಯವರ್ಮ ಕಿವಿಗೂ ಬೀಳುತ್ತದೆ.
ಕ್ಷುದ್ಧನಾದ ರಾಜ ಹಿರಣ್ಯವರ್ಮ, ರಾಜಕುಮಾರನನ್ನು (ಶಿಖಂಡಿ) ನೀಡಿದ ರಾಜ ದ್ರುಪದನ ಮೇಲೆ ಯುದ್ಧ ಸಾರುತ್ತಾನೆ. ಶಿಂಖಡಿ ಚಿಂತೆಗೀಡಾಗುತ್ತಾಳೆ. ಪುರುಷ ರೂಪದಲ್ಲಿ (ಶ್ತುನ) ತನ್ನನ್ನು ಪಾರು ಮಾಡು ಎಂದು ಕುಬೇರನ ಸೋದರ ಯಕ್ಷನ ಮೊರೆ ಹೋಗುತ್ತಾಳೆ.
ಮಹಾಭಾರತದಲ್ಲಿ ಕಥೆ ಇಲ್ಲಿಂದ ಗೋಜಲು ಗೋಜಲಾಗುತ್ತಾ ಸಾಗುತ್ತದೆ. ಈ ರೀತಿ ರೂಪ ಬದಲಾವಣೆಯಾಗುವುದು (ಮಹಿಳೆಯು ಪುರುಷನಾಗಿರುವುದು) ತಾತ್ಕಾಲಿಕವಾಗಿರುತ್ತದೆ. ಶಿಖಂಡಿ ವಾಸವಾಗಿರುವ ಸ್ಥಳವನ್ನೂ ಅದಲುಬದಲು ಮಾಡುತ್ತಾರೆ. ವಧುವಿನ ತಂದೆ ಹಿರಣ್ಯವರ್ಮ ಆಗ ಒಬ್ಬ ಮಹಿಳೆಯನ್ನು ಕಳುಹಿಸಿ ಶಿಖಂಡಿ ನಿಜಕ್ಕೂ ಪುರುಷನೆ? ಎಂಬುದನ್ನು ಪರೀಕ್ಷಿಸುವಂತೆ ಕೇಳುತ್ತಾನೆ.
ಆಗ ಕುಬೇರನಿಗೆ ಮಹಿಳೆಯು ಪುರುಷರೂಪಿಯಾಗಿರುವುದು ಗುತ್ತಾಗಿಬಿಡುತ್ತದೆ. ಇದರಿಂದ ಕೋಪ್ರೋದ್ರಿಕ್ತನಾಗಿ ಶ್ತುನಗೆ ಶಾಪ ನೀಡುತ್ತಾನೆ. ನಿನ್ನ ಈ ಸ್ತ್ರೀ ರೂಪ ಶಾಶ್ವತವಾಗಿರಲಿ ಎಂದು ಶಾಪ ನೀಡಲಾಗುತ್ತದೆ. ಅಲ್ಲಿಂದ ಮುಂದಕ್ಕೆ ಪುರುಷ ರೂಪಿ ಶಿಖಂಡಿಯು ಹಿರಣ್ಯವರ್ಮನ ಅರಮನೆಯಲ್ಲಿ ರಾಜಕುಮಾರಿಯ ಜತೆ ದಾಂಪತ್ಯ ಜೀವನ ನಡೆಸುತ್ತಾನೆ(ಳೆ).












Click it and Unblock the Notifications