ನವವಿವಾಹಿತ ಪತ್ರಕರ್ತ ಕಾಲು ಜಾರಿ ಸಾವು
ಕೊಳ್ಳೆಗಾಲ,
ಮೇ 29: ಕೇವಲ ಇಪ್ಪತ್ತು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವ ಪತ್ರಕರ್ತರೊಬ್ಬರು ಆಕಸ್ಮಾತಾಗಿ ಕಾಲುಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟ ಘಟನೆ ಮೊನ್ನೆ ಭಾನುವಾರ ನಡೆದಿದೆ. id="toptextpromo">ಬೆಂಗಳೂರಿನ
TV9 ಸುದ್ದಿವಾಹಿನಿಯ ವಿಡಿಯೋಗ್ರಾಫರ್, ಸಂಕಲನಕಾರ ಪ್ರಶಾಂತ್ (31) ಮೃತಪಟ್ಟ ದುರ್ದೈವಿ. ಕೊಳ್ಳೆಗಾಲ ತಾಲೂಕಿನ ಪ್ರಕಾಶ ಪಾಳ್ಯದ ಕರೆಯಲ್ಲಿ ಈ ದುರ್ಘಟನೆ ನಡೆದಿದೆ. id='are-slot-1' class='oiad oi-axt oiadv'> id='top-searched-articles'>ಕೊಳ್ಳೆಗಾಲ
ತಾಲೂಕಿನ ಪ್ರಕಾಶಪಾಳ್ಯದಲ್ಲಿ ತಮ್ಮ ಸ್ನೇಹಿತ ಜ್ಞಾನ ಪ್ರಕಾಶ್ ಮನೆಗೆ ಬಂದಿದ್ದ ಪ್ರಶಾಂತ್ ಸ್ನಾನಕ್ಕೆಂದು ಕೆರೆಗೆ ತೆರಳಿದ್ದ ಸಂದರ್ಭದಲ್ಲಿ ಕಾಲುಜಾರಿ ಬಿದ್ದಿದ್ದಾರೆ. ತಕ್ಷಣ ಅವರನ್ನು ರಕ್ಷಿಸಿ, ಕೊಳ್ಳೆಗಾಲದ ಜನನಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಚಾಮರಾಜನಗರ ಜಿಲ್ಲೆಯ,ಕೊಳ್ಳೆಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications