ಯಡಿಯೂರಪ್ಪ ಮೊಮ್ಮಗಳ ಮದುವೆಗೆ ಮೋದಿ

ಮೇ.30 ರಂದು ನಡೆಯಲಿರುವ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಬಿಜೆಪಿ ವರಿಷ್ಠರಾದ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಅವರ ಆಪ್ತ ವಲಯ ಸ್ಪಷ್ಟಪಡಿಸಿದೆ.
ನಾಯಕತ್ವ ಬದಲಾವಣೆ ವಿಷಯವಾಗಿ ಮೇ.29ರಂದು ನಡೆಯಬೇಕಿದ್ದ ಚಹಾ ಕೂಟವನ್ನು ಯಡಿಯೂರಪ್ಪ ಆಪ್ತರು ಮೇ.30ಕ್ಕೆ ಮುಂದೂಡಿದ್ದಾರೆ. ಸಿಎಂ ಉದಾಸಿ ಅವರ ಮನೆಯಲ್ಲಿ ಚಹಾಕೂಟ ನಡೆಯಲಿದ್ದು, ಯಡಿಯೂರಪ್ಪ ಅವರ ಬೆಂಬಲಿಗರಿಗೆ ಆಹ್ವಾನ ಹೋಗಿದೆ.
ನಾಯಕತ್ವ ಬದಲಾವಣೆಗೆ ಒತ್ತಾಯಿಸಲು ಮತ್ತೊಮ್ಮೆ ಒತ್ತಡ ತಂತ್ರಕ್ಕೆ ಶರಣಾಗಲು ಬಯಸಿದ್ದ ಯಡಿಯೂರಪ್ಪ ಪಡೆ ಯಾಕೋ ಕೊಂಚ ಹಿಂದೇಟು ಹಾಕಿದೆ. ಯಡಿಯೂರಪ್ಪ ಆಪ್ತರ ಚಹಾಕೂಟ ಮುಂದೂಡಲಾಗಿದೆ. ಮೇ.30ರಂದು ಯಡಿಯೂರಪ್ಪ ಮೊಮ್ಮಗಳ ಮದುವೆ ಇರುವುದು ವಿಶೇಷ.
ಗಡ್ಕರಿಗೆ ಶುಭಾಶಯ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಹೇಳಲು ನಾಗಪುರಕ್ಕೆ ಭಾನುವಾರ(ಮೇ.28) ಯಡಿಯೂರಪ್ಪ ತಮ್ಮ ಆಪ್ತರು ಜೊತೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ಬರುವಂತೆ ಪಕ್ಷದ ವರಿಷ್ಠರಿಗೆ ಆಹ್ವಾನವನ್ನು ಸಹಾ ನೀಡಲಾಗಿತ್ತು.
ತಮ್ಮ ಮೊಮ್ಮಗಳ ಮದುವೆ ನಂತರ ಜೂ.1 ರಿಂದ ರಾಜ್ಯಾದ್ಯಂತ ಪ್ರವಾಸ ಹೊರಟಲು ಯಡಿಯೂರಪ್ಪ ಸಿದ್ಧತೆ ನಡೆಸಿದ್ದರು. ಆದರೆ, ಪಕ್ಷದ ವರಿಷ್ಠರ ಜೊತೆ ನಡೆಯುವ ಮಾತುಕತೆ ನಂತರ ರಾಜ್ಯ ಪ್ರವಾಸದ ವೇಳಾಪಟ್ಟಿ ಕೊಂಚ ಬದಲಾವಣೆಯಾಗುವ ಸಾಧ್ಯತೆಯಿದೆ.












Click it and Unblock the Notifications