ಜಗನ್ ಬಂಧನ ಖಂಡಿಸಿ, 3 ದಿನ ಸಂಪೂರ್ಣ ಬಂದ್

ಜಗನ್ ಮೋಹನ್ ರೆಡ್ಡಿ ಅವರ ಬಂಧನ ಅಕ್ರಮವಾಗಿದ್ದು, ಚುನಾವಣೆ ದೃಷ್ಟಿಯಿಂದ ಜನಪ್ರಿಯ ನಾಯಕರನ್ನು ಬಂಧಿಸುವ ಕುತಂತ್ರವಾಗಿದೆ. ಜಗನ್ ಬಂಧನವನ್ನು ವೈಎಸ್ ಆರ್ ಪಕ್ಷ ಖಂಡಿಸಿ ಮೂರು ದಿನಗಳ ಕಾಲ ಸಂಪೂರ್ಣ ಬಂದ್ ಆಚರಿಸಲಾಗುತ್ತದೆ ಎಂದು ವೈಎಸ್ ಆರ್ ಪಕ್ಷ ಜಿಲ್ಲಾ ಮುಖ್ಯಸ್ಥ ಬೊಮ್ಮನ ರಾಜಕುಮಾರ್ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ನಿಷೇಧಾಜ್ಞೆ ವಿಧಿಸಿರುವ ಪೊಲೀಸರು, ಗೋದಾವರಿ ಜಿಲ್ಲೆಗೆ ಸೇರಿದ ವೈಎಸ್ ಆರ್ ಪಕ್ಷದ 20ಕ್ಕೂ ಅಧಿಕ ನಾಯಕರನ್ನು ಬಂಧಿಸಿದ್ದಾರೆ.
ರಾಜಮಂಡ್ರಿ ಡಿಪೋದ ಎಪಿಎಸ್ ಆರ್ ಟಿ ಬಸ್ ಗಳು ಸಂಚಾರ ಸ್ಥಗಿತಗೊಳಿಸಿದೆ. ಕರ್ನಾಟಕ ಸಾರಿಗೆ ಸಂಸ್ಥೆ ಕೂಡಾ ಗಡಿಭಾಗಕ್ಕೆ ಬಸ್ ಗಳನ್ನು ಕಳಿಸಲು ಹೆದರುತ್ತಿದೆ. ಸುಮಾರು 400-600 ಬಸ್ ಗಳ ಸಂಚಾರ ವ್ಯತಯಗೊಳ್ಳಲಿದೆ.
ತೆಲಂಗಾಣ ವಿವಾದದಿಂದಾಗಿ ಉಲ್ಬಣಗೊಂಡ ಗಲಭೆಯಿಂದ ಎರಡೂ ರಾಜ್ಯದ ಬಸ್ ಸಂಸ್ಥೆಗಳು ಭಾರಿ ನಷ್ಟ ಉಂಟಾಗಿತ್ತು. ವೈಎಸ್ ಆರ್ ಪಕ್ಷದ ಬಂದ್ ಕರೆಗೆ ಇನ್ನೂ ಯಾವುದೇ ಪಕ್ಷ, ಸಂಘಟನೆಗಳು ಬಹಿರಂಗ ಬೆಂಬಲ ವ್ಯಕ್ತಪಡಿಸಿಲ್ಲ.












Click it and Unblock the Notifications