ಭೂ ಹಗರಣ: ಶಾಸಕ ಸಿಟಿ ರವಿಗೆ ಮತ್ತೆ ಕಂಟಕ

ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 13(1), ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.
ಚಿಕ್ಕಮಗಳೂರಿನ ಕೆಎಚ್‌ಬಿ ಕಾಲೋನಿಯ ತೃತೀಯ ಹಂತದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡಿನಿಂದ ಮೂರು ನಿವೇಶನ ಪಡೆದುಕೊಂಡಿರುವ ಅಕ್ರಮದ ಬಗ್ಗೆ ಮತ್ತೆ ಶಂಕೆ ವ್ಯಕ್ತವಾಗಿದ್ದು, ತನಿಖೆಗೆ ದೂರುದಾರ ಕುಮಾರ್ ಮನವಿ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ಚಿಕ್ಕಮಗಳೂರು ನಗರ ಪಾಲಿಕೆ ಸದಸ್ಯ ದೇವಿಪ್ರಸಾದ್ ಅವರು ಆರ್ ಟಿಐ ಅರ್ಜಿ ಮೂಲಕ ವಿವರಗಳನ್ನು ಪಡೆದು ಲೋಕಾಯುಕ್ತ ಕೋರ್ಟ್ ಗೆ ಸಲ್ಲಿಸಿದ್ದರು.
ಸಿಟಿ ರವಿ ಪತ್ನಿ ಪಲ್ಲವಿ ರವಿ, ಕರ್ನಾಟಕ ಹೌಸಿಂಗ್ ಬೋರ್ಡ್ ಆಯುಕ್ತ ಲಕ್ಷ್ಮಿನಾರಾಯಣ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಆರೋಪ ಹೊರಿಸಲಾಗಿತ್ತು. ಏ.3ರಂದು ಎಲ್ಲಾ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದರು.












Click it and Unblock the Notifications