ತಿರುಮಲ ದೇವಸ್ಥಾನದಲ್ಲಿ ಕಾಲ್ತುಳಿತ : 10 ಭಕ್ತರಿಗೆ ಗಾಯ

Stampede in Tirumala temple : 10 devotees injured
ತಿರುಮಲ, ಮೇ. 26 : 'ಸಹಸ್ರ ಕಳಶಾಭಿಷೇಕ' ವಿಶೇಷ ಪೂಜೆ ಏರ್ಪಡಿಸಿದ್ದ ಸಂದರ್ಭದಲ್ಲಿ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಮಧ್ಯಾಹ್ನ ನೂಕುನುಗ್ಗಲಿನಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ 10ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಬೇಸಿಗೆ ರಜೆಯಾದ್ದರಿಂದ ವಾರಾಂತ್ಯದಲ್ಲಿ ತಿರುಮಲದಲ್ಲಿ 1 ಲಕ್ಷಕ್ಕೂ ಹೆಚ್ಚು ಜಮಾಯಿಸಿದ್ದರು. ಆದರೆ, ತಿರುಪತಿ ತಿರುಮಲ ದೇವಸ್ಥಾನಂನ ಅಜಾಗರೂಕತೆಯಿಂದಾಗಿ ನೂಕುನುಗ್ಗಲು ಸಂಭವಿಸಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾರದ ಎಲ್ಲಾ ದಿನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರಾದರೂ ಇಂದು ಶನಿವಾರವಾದ್ದರಿಂದ ದಾಖಲೆ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಸಾಮಾನ್ಯ ದರ್ಶನಕ್ಕೆ ಭಕ್ತರಿಗೆ 24 ಗಂಟೆ ತಗಲುತ್ತಿದ್ದು, ವಿಶೇಷ ದರ್ಶನಕ್ಕೆ ನಿಂತವರಿಗೆ ಸುಮಾರು 7 ಗಂಟೆ ತಲಗುತ್ತಿದೆ. ಭಕ್ತರಿಗೆ ವಾಸಕ್ಕೆ ಜಾಗವೂ ಸಿಗುತ್ತಿಲ್ಲ.

ವಿಶೇಷ ಪೂಜೆ ಏರ್ಪಡಿಸಿದ ಸಂದರ್ಭದಲ್ಲಿ ಟಿಟಿಡಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಮತ್ತು ನೂಕುನುಗ್ಗಲಾಗದಂತೆ ಪೊಲೀಸರಿಂದ ರಕ್ಷಣೆ ನೀಡಬೇಕು ಎಂಬುದು ಭಕ್ತರು ಹೇಳುತ್ತಿದ್ದಾರೆ. ಒಂದು ವರ್ಷಕ್ಕಿಂತ ಕಡಿಮೆ ಮಕ್ಕಳ ಪಾಲಕರಿಗೆ ಮತ್ತು ವಯಸ್ಸಾದವರಿಗೆ ವಿಶೇಷ ವ್ಯವಸ್ಥೆ ಇರುತ್ತದಾರದೂ ಗರ್ಭಗುಡಿ ಪ್ರವೇಶಿಸುವಾಗ ಎಲ್ಲ ಭಕ್ತಾದಿಗಳು ಇಕ್ಕಟ್ಟಾದ ಸ್ಥಳದಲ್ಲಿ ಬಂದು ಸೇರುತ್ತಾರೆ. ಅವಘಡಗಳಾಗುವುದು ಈ ಜಾಗದಲ್ಲಿಯೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+