ಕರ್ನಾಟಕ ಜನತಾ ಪಕ್ಷ ಜೂ.15ಕ್ಕೆ ಆರಂಭ?

ಕರ್ನಾಟಕ ಜನತಾ ಪಾರ್ಟಿ ಎಂಬ ಹೊಸ ಪಕ್ಷವನ್ನು ಕಟ್ಟಲು ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ. ಆದರೆ, ಇದೆಲ್ಲವೂ ರಾಷ್ಟೀಯ ಕಾರ್ಯಕಾರಿಯಲ್ಲಿ ನಡೆಯುವ ಚರ್ಚೆಯ ಮೇಲೆ ನಿರ್ಧಾರವಾಗಲಿದೆ.
ಲಾಲ್‌ಕೃಷ್ಣ ಅಡ್ವಾಣಿ, ಈಶ್ವರಪ್ಪ, ಅನಂತಕುಮಾರ್, ಸದಾನಂದಗೌಡರ ವಿರುದ್ಧ ಸರಣಿ ವಾಗ್ದಾಳಿ ನಡೆಸಿರುವ ಯಡಿಯೂರಪ್ಪ ಅವರನ್ನು ಪಕ್ಷದಿಂದ ಏಕೆ ಹೊರಹಾಕಬಾರದು ಎಂಬ ಕೂಗು ಕೂಡಾ ಎದ್ದಿದೆ.
ಯಡಿಯೂರಪ್ಪಗೆ ಶ್ರೀರಾಮುಲು ಬೆಂಬಲ?: ಒಂದು ವೇಳೆ ಪಕ್ಷದಿಂದ ಉಚ್ಚಾಟನೆಗೊಂಡರೆ ತಕ್ಷಣವೇ ಹೊಸ ಪಕ್ಷ ಘೋಷಣೆ ಸಾಧ್ಯತೆಯಿದೆ. ಯಡಿಯೂರಪ್ಪ ಅವರು ಬಿಎಸ್‌ಆರ್ ಪಕ್ಷದೊಂದಿಗೆ ಕೈ ಜೋಡಿಸುವುದು ಬಹುತೇಕ ನಿಶ್ಚಿತವಾಗಿದೆ. ಆದರೆ, ಯಡಿಯೂರಪ್ಪ ಅವರ ಮೇಲೆ ಅನುಕಂಪ ಮಾತ್ರ ಇದೆ. ಅವರ ಕೈ ಜೋಡಿಸಿಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.
ಉತ್ತರ ಪ್ರದೇಶದ ಸಮಾಜವಾದಿ ನಾಯಕ ಮುಲಾಯಂಸಿಂಗ್ ಯಾದವ್‌ರಿಂದ ಹಿಡಿದು ಎನ್‌ಸಿಪಿಯ ಶರದ್ ಪವಾರ್ ತನಕ ಎಲ್ಲರೂ ಯಡಿಯೂರಪ್ಪ ಅವರನ್ನು ಸೆಳೆಯಲು ಯತ್ನಿಸಿರುವುದು ಗುಟ್ಟಾಗಿ ಉಳಿದಿಲ್ಲ.
ಆದರೆ ಸಿಬಿಐ ತನಿಖೆ ಎದುರಿಸುತ್ತಿರುವ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಮಾತ್ರ ರಕ್ಷಣೆ ನೀಡಬಲ್ಲದಾದರೂ, ಬಿಎಸ್ ವೈಗೆ ಯಾಕೋ ಕಾಂಗ್ರೆಸ್ ಜೊತೆ ಕೈಜೋಡಿಸುವ ಮನಸ್ಸಿಲ್ಲ. ಯಾವುದಕ್ಕೂ ಜೂನ್ ಮೊದಲ ವಾರದಲ್ಲೇ ಎಲ್ಲವೂ ತಿಳಿಯಲಿದೆ.












Click it and Unblock the Notifications