ಪೆಟ್ರೋಲಲ್ಲಿ ಕೈತೊಳೆದುಕೊಂಡ ಜೈಪಾಲ್ ರೆಡ್ಡಿ

ಪೆಟ್ರೋಲ್ ಬೆಲೆ ಏರಿಕೆಯನ್ನು ಬಲವಾಗಿ ಬೆಂಬಲಿಸಿರುವ ಜೈಪಾಲ್ ರೆಡ್ಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಕೇಂದ್ರ ಸರಕಾರ ಗಮನಿಸುತ್ತಿದ್ದು, ಏರಿಸಿರುವ ಬೆಲೆಯನ್ನು ಇಳಿಸುವ ಪ್ರಮೇಯವನ್ನು ತಳ್ಳಿಹಾಕಿದರು. ತೈಲ ಬೆಲೆ ಏರಿಸುವ ನಿರ್ಧಾರ ತೈಲ ಕಂಪನಿಗಳದ್ದಾಗಿದ್ದು, ಕೇಂದ್ರ ಹೆಚ್ಚಿಗೆ ಏನೂ ಮಾಡುವುದು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದಾರೆ.
"ದೇಶ ಎರಡು ವಿಪರೀತ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಿದೆ. ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುಮುಖವಾಗಿದೆ. ಇದು ಜಾಗತಿಕ ವಿದ್ಯಮಾನವಾಗಿದ್ದು, ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಇದಕ್ಕೆ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳುವುದೂ ಅಸಾಧ್ಯ" ಎಂದು ಅವರು ಸದ್ಯದ ಪರಿಸ್ಥಿತಿಯ ಬಣ್ಣನೆ ಮಾಡಿದರು.
ಈ ಬೆಲೆ ಏರಿಕೆಯಿಂದ ದೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಕೇಂದ್ರಕ್ಕೆ ಅರಿವಿದೆ. ಆದರೆ, ತೈಲ ಬೆಲೆ ಏರಿಸದೆ ವಿಧಿಯೇ ಇಲ್ಲ. ತೀವ್ರ ನಷ್ಟವನ್ನು ಎದುರಿಸುತ್ತಿರುವ ತೈಲ ಕಂಪನಿಗಳು ಮತ್ತಷ್ಟು ಸಂಕಷ್ಟದಲ್ಲಿ ಸಿಲುಕುವುದರಿಂದ ಪಾರು ಮಾಡದೆ ಬೇರೆ ದಾರಿಯೇ ಇರಲಿಲ್ಲ ಎಂದು ಅವರು ವಿಶ್ಲೇಷಿಸಿದರು.
ಇತ್ತೀಚೆಗೆ ಅನೇಕಾನೇಕ ಕಾರಣಗಳಿಂದ ಪೆಟ್ರೋಲ್ ಬೆಲೆ ಏರಿಸದಿದ್ದರಿಂದ ತೈಲ ಕಂಪನಿಗಳು 2010-11ರಲ್ಲಿ 2,200 ಕೋಟಿ ರು. ನಷ್ಟ ಅನುಭವಿಸಿವೆ. 2011-12ರಲ್ಲಿ 4,800 ಕೋಟಿ ರು. ನಷ್ಟ ಕಂಡಿವೆ ಮತ್ತು 2012ರಲ್ಲಿ ಕಳೆದ ಎರಡು ತಿಂಗಳಲ್ಲಿ ತೈಲ ಕಂಪನಿಗಳು 2,330 ಕೋಟಿ ರು. ನಷ್ಟ ಅನುಭವಿಸಿವೆ. ಪೆಟ್ರೋಲ್ ಬೆಲೆ ನಿಯಂತ್ರಣಕ್ಕೆ ಬರಬೇಕಿದ್ದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಿಗೆ ಕೆಲಸ ಮಾಡಬೇಕು. ಎಲ್ಲ ರಾಜ್ಯಗಳು ಮತ್ತು ಎಲ್ಲ ಪಕ್ಷಗಳು ಒಗ್ಗಟ್ಟಾಗಿ ಇಂಥ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಅವರು ನುಡಿದರು.
ಪೆಟ್ರೋಲ್ ಬೆಲೆ ಇಳಿಸುವುದರಿಂದ ಕೇಂದ್ರ ಹಿಂಜರಿದಿರುವುದರಿಂದ ರಾಜ್ಯ ಸರಕಾರಗಳೇ ಶ್ರೀಸಾಮಾನ್ಯರ ಕೈಹಿಡಿಯಬೇಕಾಗಿದೆ. ತೆರಿಗೆ ಕಡಿತ ಮಾಡಿ ಕಳೆದ ಬಾರಿ ಗೋವಾ ಇತರ ರಾಜ್ಯಗಳಿಗೆ ಉತ್ತಮ ಮುನ್ನುಡಿ ಹಾಕಿಕೊಟ್ಟಿತ್ತು. ಈ ಬಾರಿ ಕೇರಳ ತೆರಿಗೆ ಕಡಿತ ಮಾಡಿ ಬೆಲೆಯಲ್ಲಿ 1.23 ರು.ನಷ್ಟು ಇಳಿಯುವಂತೆ ಮಾಡಿದೆ. ಆದರೆ, ಕರ್ನಾಟಕದ ಮುಖ್ಯಮಂತ್ರಿಗಳು ಮಾತ್ರ ಇಲ್ಲಿಯವರೆಗೆ ಯಾವುದೇ ಹೇಳಿಕೆಯಾಗಲಿ ನೀಡಿಲ್ಲ, ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಈ ಬಗ್ಗೆ ಚಿಂತಿಸಲು ಸಮಯವಾದರೂ ಎಲ್ಲಿದೆ ನಮ್ಮ ಡಿವಿ ಸದಾನಂದ ಗೌಡರಿಗೆ!
ಪೆಟ್ರೋಲ್ ಮೇಲಿನ ಹಣ ಉಳಿಕೆ ಹೇಗೆ? : ಕೇಂದ್ರವೂ ಕೈಕೊಟ್ಟಿರುವಾಗ, ರಾಜ್ಯವೂ ಹಿಂದೆಮುಂದೆ ನೋಡುತ್ತಿರುವಾಗ ಶ್ರೀಸಾಮಾನ್ಯರೇ ಪೆಟ್ರೋಲ್ ಮೇಲೆ ಹೆಚ್ಚಿಗೆ ಖರ್ಚು ಮಾಡದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತಿಸಬೇಕಿದೆ. ಈಗಾಗಲೆ ಅನೇಕ ನಾಗರಿಕರು ಸೈಕಲ್ ಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಸಾಫ್ಟ್‌ವೇರ್ ಕಂಪನಿಗಳಲ್ಲಿ ಸೈಕಲ್ ಕೊಳ್ಳಲು ನೌಕರರನ್ನು ಉತ್ತೇಜಿಸುತ್ತಿವೆ. ಅದು ಬಿಟ್ಟರೆ, ಖಾಸಗಿ ವಾಹನ ಮನೆಯಲ್ಲಿಟ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಬೇಕಿದೆ. ಅದೂ ಸಾಧ್ಯವಾಗದಿದ್ದರೆ, ಕಾರು ಬಳಸುವವರು ಕಾರ್ ಪೂಲಿಂಗ್ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಲು ಅಗತ್ಯವಿದೆ. ಈ ನಡುವೆ, ವಿರೋಧ ಪಕ್ಷ ಎನ್‌ಡಿಎ ಅಂಗಪಕ್ಷಗಳು ಪೆಟ್ರೋಲ್ ಏರಿಕೆಯ ವಿರುದ್ಧ ಮೇ 31ರಂದು ಭಾರತ ಬಂದ್‌ಗೆ ಕರೆ ನೀಡಿವೆ, ನೆನಪಿರಲಿ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications