ಸಂಬಳ ಎಷ್ಟು ಅಂತ ಮೊದಲು ಹೆಂಡ್ತಿಗೆ ಹೇಳಿ:ಕೋರ್ಟ್

ಡೈವೋರ್ಸ್ ನಂತಹ ದುರ್ಭರ ಪರಿಸ್ಥಿತಿಗಳಲ್ಲಿ ಈ ಸಂಬಳದ ವಿಚಾರ ಅತಿ ಮಹತ್ವ ಪಡೆದುಕೊಳ್ಳುತ್ತದೆ. ಆದ್ದರಿಂದ ಡೈವೋರ್ಸ್ ನಂತರ ಪರಿಹಾರ ಪಡೆಯುವ ಸಲುವಾಗಿ ಹೆಂಡತಿಯು ತನ್ನ ಗಂಡನ ಸಂಬಳ, ಆದಾಯ ತಿಳಿದುಕೊಳ್ಳುವುದು ಅವಶ್ಯಕವಾಗುತ್ತದೆ. ಅದು ಆಕೆಯ ಹಕ್ಕೂ ಆಗಿದೆ ಎಂದು ಕೋರ್ಟ್ ತೀರ್ಪು ನೀಡಿದೆ.
ವಿಚ್ಛೇಧನ ಪ್ರಕರಣಗಳಲ್ಲಿ ಮಹಿಳೆಗೆ ಪರಿಹಾರ ಮೊತ್ತ ಪ್ರಕಟಿಸಲು ಕೋರ್ಟಿಗೆ ಅಗತ್ಯ ಮಾಹಿತಿ ಬೇಕಾಗುತ್ತದೆ. ಆದ್ದರಿಂದ ಪರಿತ್ಯಕ್ತ ಗಂಡ ತನ್ನ ಹೆಂಡತಿಗೆ ತನ್ನ ಆದಾಯ ಮತ್ತು ಸಂಬಳದ ಬಗ್ಗೆ ಮಾಹಿತಿ ನೀಡುವುದು ಅತ್ಯವಶ್ಯ ಎಂದು ಹೆಚ್ಚುವರಿ ಸೆಷನ್ಸ್ ಜಡ್ಜ್ ಕಾಮಿನಿ ಲಾವ್ ಹೇಳಿದ್ದಾರೆ.
ವಕೀಲರ ಪತ್ನಿಯೊಬ್ಬರು ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಪರಿಹಾರ ಪಡೆಯುವ ಸಂಬಂಧ ಪತಿಯ ಆದಾಯದ ಪ್ರಮಾಣವನ್ನು ತಿಳಿದುಕೊಳ್ಳಲು ಅರ್ಜಿದಾರ ಮಹಿಳೆ ಗಂಡನಿಗೆ ಕೇಳಿದರು. 'ಅದು ಸಾಧ್ಯವಿಲ್ಲ. ಗಂಡನ ಸಂಬಳ ಮತ್ತು ಹೆಂಡತಿಯ ವಯಸ್ಸನ್ನು ಕೇಳುವುದುಂಟೆ!? ಅಕಟಕಟಾ' ಎಂದು ಪತಿರಾಯ ಕೋರ್ಟ್ ಮೆಟ್ಟಿಲೇರಿದರು. ಆಗ ಜಡ್ಜ್ ಕಾಮಿನಿ ಈ ತೀರ್ಪು ನೀಡಿದ್ದಾರೆ.












Click it and Unblock the Notifications