ಬೆಳಗಾವಿ: ನೂರಾರು ಕರವೇ ಕಾರ್ಯಕರ್ತರ ಸೆರೆ

ಇದಲ್ಲದೆ ಶನಿವಾರ(ಮೇ.19) ದಂದು ನಿಪ್ಪಾಣಿಯ ಮಹಾಂತೇಶ್ ನಗರ ಬಳಿ ಬೆಂಕಿ ಹಚ್ಚಲು ಯತ್ನಿಸಿದ್ದ ಚಿಕ್ಕೋಡಿ ಕರವೇ ಅಧ್ಯಕ್ಷ ಸಂಜು ಬಡಿಗೇರ್ ನೇತೃತ್ವದ ಕಾರ್ಯಕರ್ತರನ್ನು ಕೂಡಾ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ತಾಲೂಕು ಕರವೇ ಅಧ್ಯಕ್ಷ ರಮೇಶ್ ತಲವಾರ್ ಕೇರಿ ಸೇರಿದಂತೆ 8 ಜನರನ್ನು ಮಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ, ಯಲ್ಲೂರು, ಕಿತ್ತೂರು, ಚಿಕ್ಕೋಡಿ ಸೇರಿದಂತೆ ಎಲ್ಲೆಡೆ ಕರವೇ ಕಾರ್ಯಕರ್ತರಿಗೆ ದಿಗ್ಬಂಧನ ಹಾಕಲಾಗಿದೆ.
ಯಾವೊಬ್ಬ ಕನ್ನಡ ಪರ ಕಾರ್ಯಕರ್ತರು ಸೊಲ್ಲೆತ್ತಲು ಬಿಡುತ್ತಿಲ್ಲ. ಸಂವಿಧಾನ ಬದ್ಧ ಹಕ್ಕುಗಳನ್ನು ಕಿತ್ತು ಹಾಕಿಕೊಳ್ಳಲಾಗಿದೆ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾಮೇಳಾವ್ ಗೆ ಷರತ್ತುಬದ್ಧ ಒಪ್ಪಿಗೆ ನೀಡಿದ್ದೇವೆ. ಕಾನೂನು ವ್ಯವಸ್ಥೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ ಎಂದು ಜಿಲ್ಲಾಡಳಿತ ಹೇಳಿದೆ.












Click it and Unblock the Notifications