ಬಳ್ಳಾರಿ ಗಣಿ ಅಕ್ರಮಕ್ಕೆ ಸುಷ್ಮಾ ಕುಮ್ಮಕ್ಕು: ಹಿರೇಮಠ್

ಯಾರು ಈ ಹಿರೇಮಠ್?
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಸೋದರರು ನಡೆಸಿದ ಅಕ್ರಮ ಗಣಿಗಾರಿಕೆಗೆ ಸುಷ್ಮಾ ಸ್ವರಾಜ್ ನೇರವಾಗಿ ಕುಮ್ಮಕ್ಕು ನೀಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಸಹ ಸಾಥ್ ನೀಡಿದ್ದಾರೆ. ಸುಷ್ಮಾ ಸ್ವರಾಜ್ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಎಸ್.ಆರ್. ಹಿರೇಮಠ್ ಅವರು ಬಳ್ಳಾರಿಯಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹುಬ್ಬಳ್ಳಿ ವರದಿ: ಭ್ರಷ್ಟಾಚಾರದ ವಿರುದ್ಧ ನೇರವಾಗಿ ಸುಪ್ರೀಂಕೋರ್ಟ್ ಅಂಗಳದಲ್ಲೇ ಸಮರ ಸಾರಲು ಬಯಸುವ ಎಸ್ ಆರ್ ಹಿರೇಮಠ್ ಅವರು ನಿನ್ನೆಯಷ್ಟೇ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಅಕ್ರಮ ಗಣಿಗಾರಿಕೆ ಪಿತಾಮಹ ಎಂದು ಬಣ್ಣಿಸಿದ್ದರು.
ನನ್ನ ಅವಧಿಯಲ್ಲಿ ಅಕ್ರಮ ನಡೆದಿಲ್ಲ: ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ಗಣಿ ಅಕ್ರಮ ನಡೆದಿಲ್ಲ. ಹಿರೇಮಠ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಮದ್ದೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications