ಹೈಕಮಾಂಡ್ -ಶೋಭಾ, ಸುರೇಶ್ ಸಂಧಾನ ಸಫಲ?

MP Suresh Angadi
ನವದೆಹಲಿ, ಮೇ.14: ಕರ್ನಾಟಕ ಬಿಜೆಪಿ ಬಿಕ್ಕಟ್ಟಿನ ಗಾಳಿ ಬೆಂಗಳೂರಿನಲ್ಲಿ ಒಂದು ರೀತಿ, ದೆಹಲಿಯಲ್ಲಿ ಮತ್ತೊಂದು ರೀತಿ ಬೀಸುತ್ತಿದೆ. ಸಂಸತ್ತಿನ ಅಧಿವೇಶನ ನಡೆಯುತ್ತಿರುವುದರಿಂದ ನಾವು ಬೆಂಗಳೂರಿಗೆ ಬರುವುದಿಲ್ಲ ಎಂದು ಹೇಳಿದ ಹೈ ಕಮಾಂಡ್ ಬಳಿ ಯಡಿಯೂರಪ್ಪ ಆಪ್ತರ ಸಭೆ ಫಲಪ್ರದವಾಗುವ ಸಾಧ್ಯತೆಯಿದೆ.

ಆದರೆ, ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರ ರೇಸ್ ಕೋರ್ಸ್ ನಿವಾಸದಲ್ಲೆ ಹವಾಮಾನ ಬೇರೆ ರೀತಿಯೇ ಇದೆ. ಇಲ್ಲಿ ಬಂದಿರುವ ಶಾಸಕರು ಒಕ್ಕೊರಲಿನಿಂದ ಸದಾನಂದ ಗೌಡರ ಸರ್ಕಾರ ಪತನಕ್ಕ ಆಗ್ರಹಿಸಿದ್ದಾರೆ.

'ಸರ್ಕಾರ ಉಳಿಸಿಕೊಳ್ಳುವುದು ನಮ್ಮ ಉದ್ದೇಶ. ಯಡಿಯೂರಪ್ಪ ಬಿಜೆಪಿಯಲ್ಲೇ ಇರಲಿ' ಎಂದುಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ನಾಯಕರಾದ ಅರುಣ್‌ ಜೇಟ್ಲಿ, ಧರ್ಮೇಂದ್ರ ಪ್ರಧಾನ್‌, ಅನಂತಕುಮಾರ್‌ ಮೊದಲಾದವರೊಂದಿಗೆ ಶೋಭಾ ಹಾಗೂ ಸುರೇಶ್ ಅಂಗಡಿ ಚರ್ಚೆ ಮುಂದುವರೆದಿದೆ.

ಅಂಗಡಿ ಹೇಳಿಕೆ: 'ಮನೆಯಲ್ಲಿ ಜಗಳವಾದರೆ, ಮನೆ ಬಿಟ್ಟು ಹೋಗ್ತೀರಾ. ಯಡಿಯೂರಪ್ಪ ಅವರು ಮಗು ಇದ್ದಂತೆ ಎಂದು ಈಶ್ವರಪ್ಪ ಹೇಳಿದ್ದಾರಲ್ಲ ಅದನ್ನು ಹಾಕ್ರಿ ನಿಮ್ಮ ಟಿವೀಲಿ. ಬಿಕ್ಕಟ್ಟಿನಿಂದ ಮನನೊಂದ ಯಡಿಯೂರಪ್ಪ ಅವರು ಎಮೋಷನಲ್ ಆಗಿ ಮಾತಾಡ್ತಾರೆ' ಎಂದು ಸುರೇಶ್ ಅಂಗಡಿ ಹೇಳಿದರು.

'ನಾಯಕರ ಮಧ್ಯೆ ಇಗೋಇಸಂ ಇರುತ್ತೆ. ಸ್ವಭಾವ ಬದಲಾಯಿಸಿಕೊಳ್ಳೋ ಕಾಲ ಬಂದಿದೆ. ರಾಜ್ಯದಲ್ಲಿ ಬರಗಾಲ ಇದೆ. ಬಿಕ್ಕಟ್ಟು ಬಗೆಹರಿಸಿಕೊಳ್ಳುವುದು ಮುಖ್ಯ ಎಂದು ಸಂಸದ ಸುರೇಶ್ ಅಂಗಡಿ ಅವರು ದೆಹಲಿಯಲ್ಲಿ ಬೆಳಗ್ಗೆ 10.45rರ ಸುಮಾರಿಗೆ ಖಾಸಗಿ ಟಿವಿ ವಾಹಿನಿ ಸೇರಿ ಜೊತೆ ಮಾತನಾಡುತ್ತಾ ಹೇಳಿದರು.

ಆದರೆ, ಹೊರಗಡೆ ಕಾರಿನಲ್ಲಿ ಕೂತ್ತಿದ್ದ ಯಡಿಯೂರಪ್ಪ ಅವರ ಆಪ್ತೆ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಜೊತೆಗೆ ತಾವಿದ್ದ ಕಾರಿನ ಗಾಜನ್ನು ಸಹ ಕೆಳಗಿಳಿಸದೆ ಒಳಗಿನಿಂದಲೇ ಮಾಧ್ಯಮದತ್ತ ಮಂದಹಾಸ ಬೀರಿದ್ದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+