ರಾಜೀನಾಮೆ ಕೊಡ್ತೀನಿ ಬನ್ನಿ; ಬೋಪಯ್ಯಾಗೆ ಬುಲಾವ್
ಬೆಂಗಳೂರು,
ಮೇ 14: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷ ತೊರೆಯುವುದು ಗ್ಯಾರಂಟಿಯಾಗಿದೆ. ಆ ಪ್ರಯತ್ನವಾಗಿ ರಾಜೀನಾಮೆ ಪರ್ವಕ್ಕೆ ಚಾಲನೆ ನೀಡಲು ನಿರ್ಧರಸಿದ್ದಾರೆ. ಮೊದಲು ತಾವೊಬ್ಬರೇ ರಾಜೀನಾಮೆ ನೀಡುವ ಕಾರ್ಯತಂತ್ರವನ್ನು ಅವರು ರೂಪಿಸಿದ್ದಾರೆ. ಹಾಗಾಗಿ, id="toptextpromo">ಕೆಲವೇ
ಕ್ಷಣಗಳಲ್ಲಿ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ತಕ್ಷಣ ನೀವು ಬೆಂಗಳೂರಿಗೆ ಬನ್ನಿ ಎಂದು ಯಡಿಯೂರಪ್ಪ ಅವರು ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ಯಡಿಯೂರಪ್ಪ ಅವರು ಆಗ್ರಹ ಪೂರ್ವಕ ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ಅಂದರೆ ಸಂಜೆ 4 ಗಂಟೆಯೊಳಗಾಗಿ ನೀವು ಬೆಂಗಳೂರಿಗೆ ಬರದೇ ಇದ್ದರೆ ನಾನೇ ಮಡಿಕೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂಬ ಬೆದರಿಕೆಯನ್ನು ಹಾಕಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ,
ಬೋಪಯ್ಯ ಅವರು ಪ್ರಸ್ತುತ, ಸ್ವಕ್ಷೇತ್ರವಾದ ಪೊನ್ನಂಪೇಟೆಯಲ್ಲಿ ಬಿಡಾರ ಹೂಡಿದ್ದಾರೆ. ಈ ಹಿಂದೆ ಶ್ರೀರಾಮುಲು ಸಹ ಇದೇ ರೀತಿ ಮಡಿಕೇರಿಗೆ ಬಂದು ರಾಜೀನಾಮೆ ಒಗಾಯಿಸುವುದಾಗಿ ಬೋಪಯ್ಯಗೆ ತಿಳಿಸಿದ್ದರು.











Click it and Unblock the Notifications