ಬಿಎಸ್‌ವೈಗೆ ಮಂಗಳವಾರದಿಂದಲೇ ಸಿಬಿಐ ಉರುಳು

mining-cbi-enquiry-against-bsy-from-may15
ಬೆಂಗಳೂರು, ಮೇ 13: ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಚದುರಂಗದಾಟವನ್ನು ಬಿರುಸುಗೊಳಿಸಿದ್ದರೆ ಅತ್ತ ಬಿಎಸ್‌ವೈ ವಿರುದ್ಧದ ಗಣಿ ಲಂಚ ಪ್ರಕರಣದ ತನಿಖೆಯನ್ನು ಸಿಬಿಐ ಮಂಗಳವಾರದಿಂದಲೇ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

'ಯಡಿಯೂರಪ್ಪ ವಿರುದ್ಧದ ಗಣಿ ಲಂಚ ಪ್ರಕರಣಗಳ ತನಿಖೆಗೆ ಸುಪ್ರೀಂಕೋರ್ಟ್ ಶಿಫಾರಸು ಮಾಡಿರುವ ಆದೇಶದ ಪ್ರತಿ ನಮ್ಮ ಕೈಸೇರಿದೆ. ಯಡಿಯೂರಪ್ಪ ವಿರುದ್ಧದ ನಿರ್ದಿಷ್ಟ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ನಡೆಸುತ್ತಿರುವ ಸಂಸ್ಥೆಗಳಿಗೆ ಗಣಿ ಕಂಪನಿಗಳಿಂದ ಸಂದಾಯವಾದ ದೇಣಿಗೆ ಕುರಿತು ತನಿಖೆ ನಡೆಸಲಾಗುವುದು' ಎಂದು ಸಿಬಿಐ ಅಧಿಕಾರಿಯೊಬ್ಬರು ರಾಂಚಿಯಲ್ಲಿ ಶನಿವಾರ ತಿಳಿಸಿದ್ದಾರೆ.

ಕಲ್ಲಿದ್ದಲು, ವೈದ್ಯಕೀಯ ಮತ್ತು ಮೇವು ಹಗರಣ ಸೇರಿದಂತೆ ಪ್ರಮುಖ ಹಗರಣಗಳ ಪ್ರಗತಿ ಪರಿಶೀಲನೆಗೆ ರಾಂಚಿಗೆ ಎರಡು ದಿನಗಳ ಭೇಟಿಗೆ ಆಗಮಿಸಿರುವ ಸಿಬಿಐ ನಿರ್ದೇಶಕ ಎ.ಪಿ.ಸಿಂಗ್ ಅವರಿಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ತಿಳಿಸಲಾಗಿದೆ ಎಂದೂ ಸಿಬಿಐ ಅಧಿಕಾರಿ ರಾಂಚಿಯಲ್ಲಿ ತಿಳಿಸಿದ್ದಾರೆ.

ಯಡಿಯೂರಪ್ಪ ವಿರುದ್ಧದ ತನ್ನ ತನಿಖೆಯ ಪ್ರಗತಿಯನ್ನು ಸಿಬಿಐ ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟಿಗೆ ವರದಿ ಮಾಡಬಹುದು. DIG ಅಥವಾ ADIG ಶ್ರೇಣಿಯ ಹಿರಿಯ ಐಪಿಎಸ್ ಅಧಿಕಾರಿ ಸಿಬಿಐ ತನಿಖೆಯ ಉಸ್ತುವಾರಿ ವಹಿಸಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+