ಭೂತದ ಬಾಯಲ್ಲಿ ಭಗವದ್ಗೀತೆ: ಬಿಎಸ್‌ವೈ ಬೆಂಕಿ

ನಿನ್ನೆ ಶನಿವಾರ ಮಾಜಿ ಸಚಿವ ಡಾ. ಜಿ. ಮಾದೇಗೌಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ ಸದಾನಂದ ಗೌಡರು ತಮ್ಮ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ ಎಂದು ಬಗೆದ ಯಡಿಯೂರಪ್ಪ ಅವರು ಇಂದು ಸದಾನಂದರನ್ನು ಹಿಗ್ಗಾಮುಗ್ಗ ಝಾಡಿಸಿದರು.
ಸ್ವಾಮಿ ನಿಷ್ಠೆ ಇಲ್ಲದವರು, ವಚನ ಭ್ರಷ್ಟರು ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳುತ್ತಿದ್ದಾರೆ ಎಂದು ಯಡಿಯೂರಪ್ಪ ಭೋರ್ಗರೆದಿದ್ದಾರೆ. ಕಾಣಿಕೆ ನೀಡಿದರೆ ದೇವರು ಕ್ಷಮಿಸಲ್ಲ ಎಂದು ತಮ್ಮ ವಿರುದ್ಧ ಪರೋಕ್ಷವಾಗಿ ಸದಾನಂದ ಗೌಡ ಹೇಳಿದ್ದ ಮಾತುಗಳಿಗೆ ಯಡಿಯೂರಪ್ಪ ತಿರಗೇಟು ನೀಡಿದ್ದು ಹೀಗೆ.
ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಡಿಹೊಗಳಿದ ಮಾಜಿ ಸಿಎಂ, 'ಆ ಪಕ್ಷದಲ್ಲಿ ಸೋನಿಯಾ ಮಾತೆ ಅವರು ಪಕ್ಷದಲ್ಲಿ ಯಾರಾದರೂ ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ಧಾವಿಸುತ್ತಾರೆ. ಇದು ನಿಜಕ್ಕೂ ಸ್ವಾಗತಾರ್ಹ. ಅದು ಆ ಪಕ್ಷದ ಅಂತಃಸತ್ವ; ಆದರೆ ನಮ್ಮ ಪಕ್ಷದಲ್ಲಿ ಅಂತಹ ಪರಿಸ್ಥಿತಿಯಿಲ್ಲ. ನಮ್ಮವರೇ ನಮ್ಮ ಕಾಲೆಳೆಯುತ್ತಾರೆ. ಬೆನ್ನಿಗೆ ಚೂರಿ ಹಾಕುತ್ತಾರೆ. ಶಿಕ್ಷೆಗೆ ಗುರಿಯಾಗುವಂತೆ ನೋಡಿಕೊಳ್ಳುತ್ತಾರೆ. ಇದಕ್ಕೆ ನಾನೇ ಜೀವಂತ ಸಾಕ್ಷಿ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ಭ್ರಷ್ಟಾಚಾರಾದ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಬಗ್ಗೆ ಯಡಿಯೂರಪ್ಪ ನಾಲ್ಕು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಆರ್ ವಿ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications