ಮಾರುತಿ ಕಾರು ಹೊಡೆದ ರಭಸಕ್ಕೆ ಐವರು ಬಲಿ

Accident kills 5, Mysore
ಮೈಸೂರು, ಮೇ.12: ಹೆಗ್ಗಡದೇವನ ಕೋಟೆ ಬಳಿಯ ಹೈರಿಗೆ ಎಂಬ ಗ್ರಾಮದಲ್ಲಿ ಬಸ್ ಕಾಯುತ್ತಿದ್ದ ಜನರ ಮೇಲೆ ಕಾರು ಹರಿದು ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ನಾಲ್ವರನ್ನು ಬಲಿ ತೆಗೆದುಕೊಂಡ ಅಪಘಾತದ ತೀವ್ರತೆ ಸ್ಥಳೀಯ ಜನತೆ ಬೆಚ್ಚಿದ್ದಾರೆ.

ಮೃತ ಮಹಿಳೆಯರು ಮೈಸೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಲು ಬೆಳ್ಳಂಬೆಳ್ಳಗೆ ಬಸ್ ಗಾಗಿ ಕಾದು ನಿಂತಿದ್ದರು. ಆದರೆ, ಸಾವು ಮಾರುತಿ ಕಾರಿನ ರೂಪದಲ್ಲಿ ಅವರನ್ನು ಅಪ್ಪಳಿಸಿಬಿಟ್ಟಿತು. ಕಾರಿನ ಚಕ್ರಕ್ಕೆ ಮಹಿಳೆಯೊಬ್ಬರು ಸಿಕ್ಕಿಕೊಂಡು ಸುಮಾರು ದೂರ ಎಳೆದುಕೊಂಡು ಹೋದ ಕಾರು, ಪಲ್ಟಿ ಹೊಡೆದು ಬಿದ್ದಿದೆ. ತಕ್ಷಣವೇ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಶಿವಮ್ಮ, ರಾಜಮಣಿ, ಗೀತಾ ಹಾಗೂ ಮತ್ತೊಬ್ಬ ಮಹಿಳೆ ಸ್ಥಳದಲ್ಲೇ ಮೃತರಾಗಿದ್ದರೆ, ರತ್ನಮ್ಮ(28) ಎಂಬುವವರು ಕೆಆರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಸ್ಥಳದಲ್ಲೇ 4 ಜನ ಸಾವನ್ನಪ್ಪಿದ್ದು, 10 ಕ್ಕೂ ಅಧಿಕ ಜನರಿಗೆ ಗಾಯಗಳಾಗಿದೆ. ಗಾಯಗೊಂಡವರನ್ನು ಕೆಆರ್ ಆಸ್ಪತ್ರೆ ಹಾಗೂ ಜೆಎಸ್ ಎಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.

ಅಪಘಾತದ ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಎ ರಾಮದಾಸ್ ಅವರು, ತಕ್ಷಣವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಲಕ್ಷ ರು ಪರಿಹಾರ ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+