ಕುಮಾರಸ್ವಾಮಿಗೆ ಸಿಬಿಐ ತನಿಖೆ ಎಚ್ಚರಿಕೆಯ ಗಂಟೆ

ಇಂತಿಪ್ಪ ಕುಮಾರಸ್ವಾಮಿ ನಿನ್ನೆ ಆ ಪ್ರಕರಣಗಳನ್ನೆಲ್ಲ ಸಿಬಿಐ ತನಿಖೆಗೆ ಒಪ್ಪಿಸುತ್ತಿದ್ದಂತೆ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಸುಪ್ರೀಂ ನಿರ್ಧಾರ ಎಲ್ಲ ಜನನಾಯಕರಿಗೂ ಒಂದು ಎಚ್ಚರಿಕೆಯ ಗಂಟೆ ಎಂದಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುವ ವೇಳೆ ದಾವಣಗೆರೆಯ ಚನ್ನಗಿರಿಯಲ್ಲಿದ್ದ ಎಚ್ಡಿಕೆ, ತಮ್ಮ ವಿರುದ್ಧವೂ ಆರೋಪಗಳಿದ್ದು, ಸಿಬಿಐ ತನಿಖೆಗೆ ಆದೇಶಿಸಿದರೆ ಸಂಪೂರ್ಣವಾಗಿ ಸಹಕರಿಸುವೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಸುಪ್ರೀಂ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ದೂರುದಾರ ಎಸ್ ಆರ್ ಹಿರೇಮಠ ಅವರು ತಾವು ಯಡಿಯೂರಪ್ಪ ಅವರ ವಿರುದ್ಧವಷ್ಟೇ ಹೋರಾಡುತ್ತಿಲ್ಲ. ತಕ್ಷಣಕ್ಕೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ವಿರುದ್ಧದ ಪ್ರಕರಣಕ್ಕೆ ಜೀವತುಂಬುವೆ. ಆ ನಂತರ ರಾಜ್ಯದ ಮೂವರು ಮಾಜಿ ಸಿಎಂ ಗಳಾದ ಕುಮಾರಸ್ವಾಮಿ, ಧರಂಸಿಂಗ್ ಹಾಗೂ ಕೃಷ್ಣ ವಿರುದ್ಧ ಇದೇ ರೀತಿ ಗಣಿ ಅಕ್ರಮ ಪ್ರಕರಣಗಳನ್ನು ದಾಖಲಿಸುತ್ತೇನೆ ಎಂದು ಹೇಳಿರುವುದು ಈ ಜನನಾಯಕರಿಗೆ ನಡುಕವನ್ನುಂಟುಮಾಡಿದೆ.












Click it and Unblock the Notifications