ಆ ಭಗವಂತನೂ ರಾಜ್ಯವ ಕಾಪಾಡಲಾರ

ಖುದ್ದು ಆಡಳಿತಾರೂಢ ಸಮಾಜವಾದಿ ಪಕ್ಷದ ನಾಯಕರೇ ಅಪರಾಧಗಳಿಗೆ ಕುಮ್ಮಕ್ಕು ನೀಡುವುದು, ಸ್ವತಃ ಅಪರಾಧಗಳಲ್ಲಿ ಭಾಗಿಯಾಗುವುದು ಅವ್ಯಾಹತವಗಾಗಿ ನಡೆಯುತ್ತಿದೆ. ರೈಲ್ವೆ ಸ್ಟೇಷನ್ನಿನಲ್ಲಿ ಕುದುರೆ ಸವಾರಿ ಮಾಡುವುದೇನು, ಪೊಲೀಸ್ ಪೇದೆಗೆ ಬೂಟುಗಾಲಿನಿಂದ ಒದೆಯುವುದೇನು ಎಲ್ಲವೂ ನಡೆಯುತ್ತಿದೆ. ಅಲಹಾಬಾದಿನ ಹಾಂದಿಯಾ ಕ್ಷೇತ್ರದ ಶಾಸಕ ಮಹೇಶ್ ನಾರಾಯಣ್ ವಿರುದ್ಧ FIR ದಾಖಲಾಗುವುದೇನು, ಒಂದಾ, ಎರಡಾ ...
ಪರಿಸ್ಥಿತಿ ಹೀಗಿರುವಾಗ ರಾಜ್ಯ ಮುದ್ರಾಂಕ ಶುಲ್ಕ ಸಚಿವ ದುರ್ಗಾ ಪ್ರಸಾದ್ ಯಾದವ್ ಅವರು ಆ ಭಗವಂತನೂ ರಾಜ್ಯವ ಕಾಪಾಡಲಾರ ಎಂದು ಪ್ರಲಾಪಿಸಿದ್ದಾರೆ. ಗಮನಾರ್ಹವೆಂದರೆ ಖುದ್ದು ದುರ್ಗಾ ಪ್ರಸಾದ್ ರೌಡಿ ಶೀಟರ್, 25ಕ್ಕೂ ಹೆಚ್ಚು ಕೇಸುಗಳು ಅವರ ವಿರುದ್ಧ ದಾಖಲಾಗಿವೆ.
ಅದೂ ಪಕ್ಷ ರಾಷ್ಟ್ರೀಯ ಸ್ತರದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಯತ್ನಿಸುತ್ತಿರುವಾಗ ಈ ಗೊಡವೆ ಬೇಕಿತ್ತೇ? ಎಂದು ಯುಪಿ ಮಂದಿ ಕೇಳುತ್ತಿದ್ದಾರೆ. ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ನಾಯಕದ್ವಯರು ಮಾತ್ರ ಬಾಯಿ ಮಾತಿಗೆ 'ಶಿಸ್ತು-ಸಂಯಮ ಕಾಪಾಡಿಕೊಳ್ಳಿ' ಎಂದು ತಮ್ಮ ಶಾಸಕರು, ಮಂತ್ರಿಗಳಿಗೆ ಅಲವತ್ತುಕೊಂಡಿದ್ದಾರೆ.












Click it and Unblock the Notifications