ಸಚಿವ ಸ್ಥಾನ ಆಕಾಂಕ್ಷಿ ಸಿಟಿ ರವಿ ಕಂಗಾಲು

ಈ ಮಧ್ಯೆ, ಜೀವಮಾನದಲ್ಲಿ ಒಮ್ಮೆಯಾದರೂ ಮಂತ್ರಿ ಅನ್ನಿಸಿಕೊಳ್ಳಬೇಕು ಎಂಬ ಹಪಹಪಿಗೆ ಬಿದ್ದಿರುವ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರು ಈ ಬೆಳವಣಿಗೆಗಳಿಂದ ಕಂಗಾಲಾಗಿದ್ದಾರೆ. ಇನ್ನೇನು ಸುಪ್ರೀಂಕೋರ್ಟ್ ಆಗ್ಲೋ ಈಗ್ಲೋ ಯಡಿಯೂರಪ್ಪ ವಿರುದ್ಧ ತೀರ್ಪು ನೀಡಲಿದೆ.
ಆಗ ತಕ್ಷಣ ಹೈಕಮಾಂಡ್ ಹಸಿರು ನಿಶಾನೆ ಮೇರೆಗೆ ಮುಖ್ಯಮಂತ್ರಿ ಸದಾನಂದರು ತಮ್ಮ ಸಂಪುಟ ವಿಸ್ತರಿಸುತ್ತಾರೆ. ಆಗ ಮಂತ್ರಿಯಾಗುವ ಯೋಗ ತನಗೆ ದಕ್ಕುತ್ತದೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ಸೀಟಿ ರವಿಗೆ ಈಗ ಹೃದಯವೇ ಬಾಯಿಗೆ ಬಂದಂತಾಗಿದೆ.
ಹಾಗಾಗಿ 'ದೇವ್ರು, ಯಡಿಯೂರಪ್ನೋರೆ. ದಯವಿಟ್ಟು ಸುಮ್ಕಿರಿ. ಸಂಪುಟ ವಿಸ್ತರಣೆಗೆ ಬ್ರೇಕ್ ಹಾಕಬೇಡಿ. ನಾನು ಮಂತ್ರಿ ಆಗುವುದಕ್ಕೆ ಕತ್ತರಿ ಆಡಿಸಬೇಡಿ. ಸದ್ಯಕ್ಕೆ ನೀವು ಏನೂ ತಗಾದೆ ತೆಗೆಯಬೇಡಿ' ಎಂದು ಯಡಿಯೂರಪ್ಪನವರಿಗೆ ಅಡ್ಡಬಿದ್ದಿದ್ದಾರೆ.
ಅಷ್ಟೇ ಸಾಲದು ಅಂತ ಸುಮಾರು 70ಕ್ಕೂ ಹೆಚ್ಚು ಶಾಸಕರ ಸಹಿಯುಳ್ಳ ಪತ್ರವನ್ನು ಮೊದಲು ಮಾಜಿ ಸಿಎಂ, ನಂತರ ಹಾಲಿ ಸಿಎಂ ಹಾಗೂ ಪಕ್ಷದ ರಾಜ್ಯಾದ್ಯಕ್ಷರೂ, ಕೊನೆಗೆ ದೆಹಲಿಗೆ ತೆರಳಿ ಅಲ್ಲಿರುವ ವರಿಷ್ಠರಿಗೂ ಪತ್ರ ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಆಗಲಾದರೂ ಸಿಟಿ ರವಿ, ಸಚಿವ ಸಿಟಿ ರವಿ ಆಗುತ್ತಾರಾ? ಕಾಲಾಯತಸ್ಮೈನಮಃ !












Click it and Unblock the Notifications