ಬಿಎಸ್ ವೈ ಆಪ್ತರಿಗೆ ಸಂಪುಟದಿಂದ ಕೊಕ್ ಇಲ್ಲ

BS Yeddyurappa
ಬೆಂಗಳೂರು, ಮೇ.9 : ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗುವುದೋ ಯಾರಿಗೂ ಗೊತ್ತಿಲ್ಲ. ಆದರೆ, ಸಂಪುಟ ಆಕಾಂಕ್ಷಿಗಳು, ಹಾಲಿ ಸಚಿವರಲ್ಲಿ ಮಾತ್ರ ತಳಮಳ, ಗೊಂದಲ, ಗುಂಪುಗಾರಿಕೆ ನಡೆದಿದೆ. ಈ ನಡುವೆ ಯಡಿಯೂರಪ್ಪ ಅವರ ಆಪ್ತರಿಗೆ ಸಚಿವ ಸಂಪುಟದಿಂದ ಕೊಕ್ ನೀಡಲಾಗುವುದು ಎಂಬ ವರದಿಯನ್ನು ಮುಖ್ಯಮಂತ್ರಿ ಸದಾನಂದ ಗೌಡ ಅಲ್ಲಗೆಳೆದಿದ್ದಾರೆ.

ಅಂತರಿಕ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ವೈಯಕ್ತಿಕ ನೆಲೆಯಲ್ಲಿ ಯಡಿಯೂರಪ್ಪ ಅವರ ಏನೇ ಭಿನ್ನಾಭಿಪ್ರಾಯ ಇದ್ದರೂ ಅವರ ಆಪ್ತರು ಎನ್ನುವ ಕಾರಣಕ್ಕೆ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನುಭವಿಗಳನ್ನು ಸಂಪುಟದಿಂದ ಕೈ ಬಿಡುವುದು ಸರಿಯಲ್ಲ ಎಂದು ಬಿಜೆಪಿಗೆ ಮನವರಿಕೆಯಾಗಿದೆ.

ಸಚಿವರನ್ನು ಕೈಬಿಡುವ ಮೂಲಕ ಆಡಳಿತಕ್ಕೆ ಧಕ್ಕೆ ಉಂಟುಮಾಡಕೂಡದು ಎಂದು ಹೈಕಮಾಂಡ್ ಸದಾನಂದಗೌಡರಿಗೆ ಎಚ್ಚರಿಸಿದೆ.

ಯಡಿಯೂರಪ್ಪ ಕುರಿತ ಕೋರ್ಟ್ ನಿರ್ಧಾರ ಬಂದ ಕೂಡಲೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ಆದರೆ, ಸಂಪುಟ ವಿಸ್ತರಣೆಗೂ ಯಡಿಯೂರಪ್ಪ ಅವರ ಕೇಸಿಗೂ ಸಂಬಂಧವಿಲ್ಲ ಎಂದು ಸದಾನಂದ ಗೌಡ ಹೇಳಿದ್ದಾರೆ.

ಆದರೆ, ಏತಕ್ಕೆ ಸುಮ್ಮನೆ ರಿಸ್ಕ್, ಕೋರ್ಟ್ ತೀರ್ಮಾನ ಹೊರಬೀಳಲಿ ಎಂದು ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬವಾಗಿದೆ.

ಹೊಸಬರಿಗೆ ಆದ್ಯತೆ: ತಮ್ಮ ತಲೆ ಮೇಲಿರುವ 20 ಪ್ಲಸ್ ಖಾತೆಗಳ ಹೊರೆಯನ್ನು ಹೊಸಬರಿಗೆ ನೀಡಲು ಸದಾನಂದ ಗೌಡ ಯೋಜಿಸಿದ್ದಾರೆ. ಯಾವುದಕ್ಕೂ ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಿಗೆ ಬಂದ ನಂತರ ಪಟ್ಟಿ ಅಂತಿಮವಾಗುವ ಸಾಧ್ಯತೆಯಿದೆ. ಸದ್ಯಕ್ಕಂತೂ ಯಡಿಯೂರಪ್ಪ ಆಪ್ತರು ಸೇಫ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+