ಪತ್ನಿ ಸೀತೆಯಂತೆ ಪತಿಯ ಅನುಸರಿಸಬೇಕು: ಕೋರ್ಟ್

wife-should-follow-goddess-sita-high-court
ಮುಂಬೈ, ಮೇ 9: 'ಪತ್ನಿ ಸೀತಾಮಾತೆಯಂತೆ ಇರಬೇಕು. ವಿವಾಹಿತ ಮಹಿಳೆ ಆಕೆಯ ಆದರ್ಶವನ್ನು ಪಾಲಿಸುವಂತಾಗಬೇಕು' ಎಂದು ಡೈವೋರ್ಸ್‍ ಪ್ರಕರಣವೊಂದರಲ್ಲಿ ತೀರ್ಪು ನೀಡುತ್ತಾ ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದ (SCI) ಉದ್ಯೋಗಿಯೊಬ್ಬರು ಕಾರ್ಯಭಾರದಿಂದ ಪೋರ್ಟ್ ಬ್ಲೇರಿಗೆ ವರ್ಗವಾಗಿದ್ದರು. ಆದರೆ ಅವರ ಪತ್ನಿ ತಾನು ಅಲ್ಲಿಗೆ ಬರೋಲ್ಲ ಎಂದು ವರಾತ ತೆಗೆದಿದ್ದರು. ಇದರಿಂದ ಬೇಸತ್ತ ಆ ಉದ್ಯೋಗಿಯು ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಅದಕ್ಕೆ ಸ್ಪಂದಿಸಿದ ನ್ಯಾ. ಪಿಬಿ ಮಜೂಂದಾರ್ ಮತ್ತು ಅನೂಪ್ ಮೊಹ್ತಾ ಅವರ ನ್ಯಾಯಪೀಠ ಶ್ರೀರಾಮ ಚಂದ್ರ 14 ವರ್ಷ ವನವಾಸಕ್ಕೆ ತೆರಳಿದಾಗ ಸೀತೆ ಆತನನ್ನು ಅನುಸರಿಸಿದಳು. ಇತರೆ ಮಹಿಳೆಯರೂ ಇದರಿಂದ ಪಾಠ ಕಲಿಯೇಕಿದೆ ಎಂದು ನ್ಯಾಯಪೀಠ ಕಿವಿಮಾತು ಹೇಳಿದೆ.

ಅರ್ಜಿದಾರ SCI ಉದ್ಯೋಗಿಯು ಮೂಲತಃ ಕೋಲ್ಕೊತ್ತಾದವರು. ಅವರು ಮುಂಬೈ ನಿವಾಸಿಯನ್ನು 2000 ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಐದು ವರ್ಷ ಕಾಲ ಮುಂಬೈನಲ್ಲೇ ಉದ್ಯೋಗದಲ್ಲಿದ್ದ ಅರ್ಜಿದಾರ, ಆನಂತರ ಪೋರ್ಟ್ ಬ್ಲೇರಿಗೆ ವರ್ಗವಾದರು. ದಂಪತಿಗೆ 5 ವರ್ಷದ ಮಗಳು ಇದ್ದಾಳೆ. ಆಗ ಸಂಸಾರ ಸಮೇತ ಪೋರ್ಟ್ ಬ್ಲೇರಿಗೆ ಹೋಗೋಣ ಎಂದು ಪತಿ ಹೇಳಿದ್ದಕ್ಕೆ ಪತ್ನಿ ಸುತರಾಂ ಒಪ್ಪಲಿಲ್ಲ. ಅನ್ಯಮಾರ್ಗವಿಲ್ಲದೆ ಪತಿಮಹಾಶಯ ಸೀದಾ ಕೋರ್ಟ್ ಮೆಟ್ಟಿಲೇರಿದರು.

ಮಗುವಿನ ಭವಿಷ್ಯದ ದೃಷ್ಟಿಯಲ್ಲಿ ಕೋರ್ಟ್, ಪತಿ-ಪತ್ನಿ ನಡುವೆ ಸಂಧಾನಕ್ಕೆ ಯತ್ನಿಸಿದೆ. ಆದರೆ ಮರುಸಾಂಗತ್ಯಕ್ಕೆ ಮಹಿಳೆ ಬಿಲ್ ಕುಲ್ ಒಪ್ಪದ ಕಾರಣ ವಿಚಾರಣೆಯನ್ನು ಕೋರ್ಟ್ ಜೂನ್ 21ಕ್ಕೆ ಮುಂದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+