ಬ್ಯಾಂಕ್ ಖಾತೆ ಸ್ಥಗಿತ: ಪತ್ರಿಕಾ ಸ್ವಾತಂತ್ರ್ಯ ಹರೋಹರ

ನಿರೀಕ್ಷಿತ: ಸಿಬಿಐ ನನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುತ್ತಿದೆ ಎಂಬುದು ಸುಳಿವು ಸಿಕ್ಕಿತು. ಅದು ತೀರಾ ನಿರೀಕ್ಷಿತ. ಸಿಬಿಐನ ಎಲ್ಲ ಆಟಗಳನ್ನು ನಾನು ಚೆನ್ನಾಗಿ ಬಲ್ಲೆ ಎಂದು ಜಗನ್ ಪ್ರತಿಕ್ರಿಯಿಸಿದ್ದಾರೆ.
ಇದರಿಂದ ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಮತ್ತು ತಕ್ಷಣ ಕಾನೂನಿನ ಮೊರೆ ಹೋಗುವುದಾಗಿ ಉಪಚುನಾವಣೆ ಪ್ರಚಾರ ನಿಮಿತ್ತ ಅನಂತಪುರ ಜಿಲ್ಲೆ ರಾಯದುರ್ಗದಲ್ಲಿ ವಾಸ್ತವ್ಯ ಹೂಡಿರುವ ಜಗನ್ ಪ್ರತಿಕ್ರಿಯಿಸಿದ್ದಾರೆ.
ನಿನ್ನೆಯಷ್ಟೇ ಸಿಬಿಐ ವಿಶೇಷ ಕೋರ್ಟ್ ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಪುತ್ರ ಜಗನ್ ಹಾಗೂ ಇತರೆ 12 ಮಂದಿಗೆ ಮೇ 28ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.
ಬಳ್ಳಾರಿ ವರದಿ: ವೈಎಸ್‌ಆರ್ ಕಾಂಗ್ರೆಸ್ ಪಕ್ಷಾಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ಕಂಪ್ಲಿಯ ಬಿಜೆಪಿ ಶಾಸಕ ಸುರೇಶ್ ಬಾಬು ಅವರನ್ನು ಬಳ್ಳಾರಿಯಲ್ಲಿ ಮಂಗಳವಾರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ರಾಯದುರ್ಗ ವಿಧಾನಸಭಾ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ರಾಮಚಂದ್ರ ರೆಡ್ಡಿ ಪರ ಪ್ರಚಾರಕ್ಕೆ ಆಗಮಿಸಿದ್ದ ಜಗನ್, ಸೋಮವಾರ ರಾತ್ರಿ ಬಳ್ಳಾರಿಯಲ್ಲಿ ರಾಮಚಂದ್ರ ರೆಡ್ಡಿ ನಿವಾಸದಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗೆ ಜಗನ್ ಅವರನ್ನು ಸುರೇಶ್ ಬಾಬು ಭೇಟಿ ಮಾಡಿ ಚರ್ಚೆ ನಡೆಸಿದರು. ಇಬ್ಬರೂ ನಾಯಕರು ಸುಮಾರು ಅರ್ಧ ತಾಸು ಮಾತುಕತೆ ನಡೆಸಿದರು. ಆದರೆ, ಭೇಟಿ ಕುರಿತು ಇಬ್ಬರೂ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications