ಬೆಂಗಳೂರು: ಸರಸಕ್ಕೆ ನಕಾರ, ಪತ್ನಿ ಕೊಂದ ಪತಿ

'45 ವರ್ಷದ ಪೆರುಮಾಳ್ ತನ್ನ ಪತ್ನಿ ಕೃಷ್ಣವೇಣಿ(40)ಯನ್ನು ಮೋಟಪ್ಪನ ಪಾಳ್ಯದ ನಿವಾಸದಲ್ಲಿ ಹತ್ಯೆಗೈದಿದ್ದಾನೆ. ಸುತ್ತಿಗೆ ತೆಗೆದುಕೊಂಡು ಮಂಗಳವಾರ 1.30ಕ್ಕೆ ಪತ್ನಿ ತಲೆ ಒಡೆದ ಪೆರುಮಾಳ್ ಬೆಡ್ ಶೀಟ್ ಹೊದ್ದಿಕೊಂಡು ಸ್ಟೇಷನ್ ಬಂದು ತನ್ನ ಕತೆ ಹೇಳಿಕೊಂಡು ಮಲಗಿಕೊಂಡಿದ್ದಾನೆ' ಎಂದು ಇಂದಿರಾನಗರ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.
ಕೃಷ್ಣವೇಣಿ ಗರ್ಭಾಶಯದ ಶಸ್ತ್ರಚಿಕಿತ್ಸೆಯಾದ ಮೇಲೆ ಪತಿ ಪೆರುಮಾಳ್ ಜೊತೆ ಮಲಗುವುದನ್ನು ಬಿಟ್ಟಿದ್ದರು ಎನ್ನಲಾಗಿದೆ. ಧರ್ಮಪುರಿ ಮೂಲದ ಈ ಕುಟುಂಬ ರದ್ದಿ ಕಾಗದ ಮಾರಾಟ ವ್ಯಾಪಾರ ನಡೆಸುತ್ತಿದ್ದರು. ಪೆರುಮಾಳ್ ಮಕ್ಕಳು ಸುರೇಶ್ ಹಾಗೂ ಸೆಂದಿಲ್ ಅವರು ಘಟನೆ ನಡೆದಾಗ ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.
ಮೊದಲಿಗೆ ಕುಡುಕ ಪೆರುಮಾಳ್ ಕತೆ ಕೇಳಿ ಸುಮ್ಮನೆ ನಗಾಡಿದ ಪೊಲೀಸರು, ನಂತರ ಘಟನಾ ಸ್ಥಳಕ್ಕೆ ತೆರಳಿ ಕೊಲೆಯನ್ನು ಖಾತ್ರಿ ಪಡಿಸಿಕೊಂಡ ಮೇಲೆ ಪೆರುಮಾಳ್ ನನ್ನು ಬಂಧಿಸಿದ್ದಾರೆ. ಕೃಷ್ಣವೇಣಿ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸುವುದಾಗಿ ಡಿಸಿಪಿ ಕೃಷ್ಣಭಟ್ ಹೇಳಿದ್ದಾರೆ.












Click it and Unblock the Notifications