ರಾಷ್ಟ್ರಪತಿ ಆಗ್ತೀರಾ? ನೋ ಕಾಮೆಂಟ್ಸ್ : ಇನ್ಫಿ ಮೂರ್ತಿ

'ಇದು ಅಸಮಂಜಸವಾದ ಪ್ರಶ್ನೆ, ಈ ವಿಷಯದ ಕುರಿತು ಯಾರೂ ಮಾತನಾಡಬಾರದು, ಈ ವಿಷಯದಲ್ಲಿ ಪರಿಣತರು ತೀರ್ಮಾನ ಕೈಕೊಳ್ಳುತ್ತಾರೆ. ಮತ್ತು ಇದರ ಬಗ್ಗೆ ಚರ್ಚಿಸಲು ನಾನ್ಯಾರು' ಎಂದು ಸಿಡುಕಿನಿಂದಲೇ ಉತ್ತರಿಸಿದರು.
ಉತ್ತಮ ರಾಷ್ಟ್ರಪತಿ ಅಭ್ಯರ್ಥಿಯನ್ನು ರಾಜಕೀಯ ಪಕ್ಷಗಳ ನಾಯಕರೇ ಆಯ್ಕೆ ಮಾಡಲಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಇದರ ಬಗ್ಗೆ ಚರ್ಚಿಸಲು ಮನಸಿಲ್ಲ ಎಂಬಂತೆ ಇನ್ಫಿ ಮೂರ್ತಿ ಹೆಚ್ಚಿನ ಚರ್ಚೆಯನ್ನು ನಿರಾಕರಿಸಿದರು.
ಸೋಮವಾರ(ಮೇ.7) ಇಲ್ಲಿನ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಪ್ರಮುಖ ರಾಜಕೀಯ ನಾಯಕರು ಕೈಗೊಳ್ಳಲಿದ್ದಾರೆ. ಯಾರು ಅಭ್ಯರ್ಥಿ ಆಗಬೇಕು, ಆಗಬಾರದು ಎಂದು ನಾನು ಆಲೋಚಿಸುವುದಿಲ್ಲ. ಈ ವಿಷಯದ ಕುರಿತು ಚರ್ಚಿಸಲು ನಾನು ಸೂಕ್ತ ವ್ಯಕ್ತಿಯಲ್ಲ ಎಂದು ಇನ್ಫೋಸಿಸ್‌ನ ಮಾಜಿ ಅಧ್ಯಕ್ಷ ಎನ್ ಆರ್ ನಾರಾಯಣ ಮೂರ್ತಿ ಹೇಳಿದರು.












Click it and Unblock the Notifications