ಶೋಭಾ ಕರಂದ್ಲಾಜೆಗೆ ಕೊಕ್: ಸಕಾರಣಗಳೇನು?

absent-minded-shobha-versus-putturites
ಪುತ್ತೂರು, ಮೇ7: ನಿನ್ನೆ ನಡೆದ ಒಕ್ಕಲಿಗ ಗೌಡ ಸಮಾವೇಶದಲ್ಲಿ ಮಾಜಿ ಸಿಎಂ ಜತೆಗೂಡಿ ನಾಡಿನ ದೊರೆ ಸದಾನಂದ ಗೌಡರು ಭರ್ಜರಿಯಾಗಿಯೇ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಜತೆಗೆ, ತಮ್ಮ ಸಂಪುಟ ಸಹೋದ್ಯೋಗಿಗೆ ಮಣೆ ಹಾಕದೆ ಮತ್ತೊಬ್ಬ ಮಾಜಿ ಸಿಎಂಗೆ ಬರೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ಆದರೆ ವಾಸ್ತವವಾಗಿ ತವರಿನಲ್ಲಿ, ತಮ್ಮದೇ ಕುಲಬಾಂಧವರ ಸಮಾವೇಶ ನಡೆಯುತ್ತಿದ್ದರೂ ಪುರುಸೊತ್ತಾಗಿಯೇ ಇದ್ದ ಶೋಭಾ ಮೇಡಂ ಅತ್ತ ತಲೆಯಿಟ್ಟೂ ಮಲಗಿಲ್ಲ. ಇದು ಶೋಭಾಗೆ ಗೌಡರು ಕೊಕ್ ಕೊಟ್ಟಿದ್ದೋ ಅಥವಾ ಊರಿನ ಜನ ಮೇಡಂರಿಂದ ವಿಮುಖಗೊಂಡಿದ್ದೋ?

ಹೀಗೇಕೆ ಎಂದು ಕೆದಕಿದಾಗ... ಆಗಾಗ ಜಾರಿಯಲ್ಲಿರುವ ಕದನ ಕುತೂಹಲ ಬಿಚ್ಚಿಕೊಳ್ಳುತ್ತದೆ. ಅತ್ತ ಯಶವಂತಪುರ ಕ್ಷೇತ್ರದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿ, ಮಂತ್ರಿಯಾಗಿದ್ದೆ ಬಂತು ಶೋಭಾ ಮೇಡಂ ತವರನ್ನು ಮರೆತರು. ಇನ್ನು, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ವಲಯದೊಳಕ್ಕೆ ಪ್ರವೇಶಿಸುತ್ತಿದ್ದಂತೆ ತವರಿನ ಜನತೆಯನ್ನೂ ಕಡೆಗಣಿಸಿದರು ಎಂಬ ಆರೋಪವಿದೆ.

'absent-minded' ಶೋಭಾ ಮೇಡಂ: ಈ ಮಧ್ಯೆ ತವರಿನಲ್ಲಿ ಎಷ್ಟೋ ಸಮಾರಂಭಗಳು ನಡೆದವು. ಶೋಭಾ ಪ್ರಜ್ಞಾಪೂರ್ವಕವಾಗಿ ಅದಕ್ಕೆಲ್ಲ absent ಆಗುತ್ತಾ ಹೋದರು. ಖುದ್ದು ವಿದ್ಯುತ್ ಸಚಿವೆಯ ಉಸ್ತುವಾರಿಯಲ್ಲಿ ಸವಣೂರು ಉಪ-ವಿದ್ಯುತ್ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ನಡೆದಾಗ ಪಕ್ಷದ ನಾಯಕರು ಮಗುಮ್ಮಾಗಿ absent ಆದರು. ಇನ್ನು ಪಕ್ಷದ ಸ್ಥಳೀಯ ಕಚೇರಿಯತ್ತ ಶೋಭಾ ಮೇಡಂ ತಲೆಹಾಕಿಲ್ಲ. ಇದರಿಂದ ಸ್ಥಳೀಯ ನಾಯಕರಿಗೆ ಶೋಭಾ ಮೇಡಂ ಅಂದರೆ ಅಷ್ಟಕ್ಕಷ್ಟೇ ಎಂಬ ಮಾತುಗಳೂ ಕೇಳಿಬಂದಿವೆ.

ಇದಕ್ಕೂ ಮುನ್ನ ಒಕ್ಕಲಿಗ ಗೌಡ ಸಮುದಾಯಕ್ಕೆ ಸೇರಿದ ಸ್ಥಳೀಯ ನಾಯಕರನ್ನು ಸನ್ಮಾನಿಸಲು ಆಯೋಜಿಸಲಾಗಿದ್ದ ಸಭೆಗೆ ಶೋಭಾ ಮೇಡಂ absent ಆಗಿದ್ದರು. ಇನ್ನೂ ಒಂದು ಸನ್ಮಾನ ಸಮಾರಂಭಕ್ಕೂ ಮೇಡಂ ಅವರು ಬರಲಿಲ್ಲ ಎಂದು ಸ್ಥಳೀಯ ನಾಯಕರು ಹೇಳುತ್ತಾರೆ. ಗಮನಾರ್ಹವೆಂದರೆ ಅಪ್ಪನ ಶ್ರಾದ್ಧಕ್ಕೆಂದು ಶೋಭಾ ಅವರು ತವರಿಗೆ ಬಂದಿದ್ದರು. ಆ ವೇಳೆ ಇಡೀ ಯಡಿಯೂರಪ್ಪ ಅವರ ತಂಡ ಹಾಜರಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+