ಈಶ್ವರಪ್ಪ ವಿದೇಶ ಪ್ರವಾಸಕ್ಕೆ ಸಿಎಂ ok ಅಂದ್ರಪ್ಪ

ಆದರೆ ಈಶ್ವರಪ್ಪ ವಿದೇಶ ಪ್ರವಾಸ ಕುರಿತು ರಾಜಧಾನಿಯಲ್ಲಿ ಸುದ್ದಿಗಾರರಿಂದ ಪ್ರಶ್ನೆ ತೂರಿಬರುತ್ತಿದ್ದಂತೆ ಸದಾನಂದರು ಮ್ಲಾನವದನರಾಗಿ ತಡಬಡಾಯಿಸಿದ್ದಾರೆ. ಮೊದಲು, 'ಇಲ್ಲ ಅವರು ವಿದೇಶಕ್ಕೆ ಹೋಗಿಲ್ಲ. ಇಲ್ಲೇ ಪಕ್ಕದ ರಾಜ್ಯಕ್ಕೆ ತೆರಳಿದ್ದಾರೆ' ಅಂದಿದ್ದಾರೆ. ಅದಕ್ಕೆ ಪತ್ರಕರ್ತರು 'ಇಲ್ಲ ಮಹಾಸ್ವಾಮಿ ಇವತ್ತು ಬೆಳ್ಳಂಬೆಳಗ್ಗೆ ವಿಮಾನ ಹತ್ತಿ ಹೊಂಟಿದ್ದಾರೆ' ಅಂತ ಖಚಿತ ಮಾಹಿತಿ ನೀಡಿದಾಗ ಸದಾನಂದರು ಮತ್ತೆ ದಿಕ್ಕುತಪ್ಪಿಸಲು ಯತ್ನಿಸಿದ್ದಾರೆ.
'ಇಲ್ಲ. ಇಲ್ಲೇ ಪಕ್ಕದ ದೇಶಕ್ಕೆ (ನೇಪಾಳ) ಹೋಗಿದ್ದಾರೆ. ಇನ್ನೇನು ಬಂದುಬಿಡ್ತಾರೆ' ಅಂದಿದ್ದಾರೆ. 'ಅಲ್ಲ ಮಹಾಸ್ವಾಮಿ...' ಅಂತ ಪತ್ರಕರ್ತರು ಮತ್ತೆ ಖ್ಯಾತೆ ತೆಗೆದಾಗ 'ಅವರು ಎಲ್ಲಿ ಹೋಗಿದ್ದಾರೋ ನಂಗೇನೂ ಗೊತ್ತಿಲ್ಲ. ಅವರೇನೂ ನನಗೆ ಹೇಳಿಹೋಗಿಲ್ಲ' ಎಂದು ನುಣುಚಿಕೊಂಡಿದ್ದಾರೆ.
ಈ ಹಿಂದೆ ಖುದ್ದು ಸದಾನಂದ ಗೌಡರೇ ವಿದೇಶಕ್ಕೆ ಹೊರಟು ನಿಂತಾಗ ಮಾಜಿ ಸಿಎಂ ಒಬ್ಬರು ಸದಾನಂದ ಗೌಡರೇ ಹಂಗೆಲ್ಲ ವಿದೇಶಕ್ಕೆ ಹೋಗಬೇಡೀಪ್ಪಾ ಎಂದು ಬುದ್ದಿವಾದ ಹೇಳಿದ್ದರು. ಅದಕ್ಕೆ ತಲೆಬಾಗಿದ್ದ ಸದಾನಂದರು ಇಲ್ಲ ನಾನೊ ವಿದೇಶಕ್ಕೆ ಹೋಗೊಲ್ಲ ಎಂದು ಹೇಳಿ ಸುಮ್ಮನಾದರು.
ಆ ನಂತರ ಮತ್ತೊಬ್ಬ ಸಚಿವ ಮಹಾಶಯರು ಅಧಿಕಾರಿಗಳ ತಂಡ ಮತ್ತು ಸಂಸಾರ ಸಮೇತ ವಿದೇಶಕ್ಕೆ ಹೋಗಿದ್ದರು. ಆಗ ಇದೇ ಸದಾನಂದರು ಆ ಸಚಿವರನ್ನು ಒಂದೇ ಏಟಿಗೆ ವಾಪಸ್ ಕರೆಸಿಕೊಂಡಿದ್ದರು. ಈಗ ಇದೇ ಸದಾನಂದರು ಈಶ್ವರಪ್ಪ ಅವರನ್ನೂ ಹಾಗೇ ಅರ್ಧಕ್ಕೇ ವಿದೇಶದಿಂದ ವಾಪಸಾಗುವಂತೆ ವಿನಂತಿಸುವುದಾಗಿ ಹೇಳಿದ್ದಾರೆ.
ಈ ಮಧ್ಯೆ, ಅಧಿಕಾರಿಗಳು ಮತ್ತು ಸಚಿವರಿಗೆ ಒಂದು ನ್ಯಾಯ ಪಕ್ಷದ ನಾಯಕರಿಗೆ ಮತ್ತೋಂದು ನ್ಯಾಯವೋ?, ಯಾವ ಉದ್ದೇಶಕ್ಕೆ ಅಂತ ವರು ವಿದೇಶಕ್ಕೆ ತೆರಳಿದ್ದಾರೆ? ಎಂದು ಗೊಣಗಾಡುತ್ತಿದ್ದಾರೆ.












Click it and Unblock the Notifications