ಪೊಲೀಸ್ ಮೇಲೆ ಮಾಜಿ ವೇಗಿ ವೆಂಕಿ ಪತ್ನಿ ಆರ್ಭಟ

ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಅವರಿಗೆ ಡಿಸಿಪಿ ರವಿಕಾಂತೇ ಗೌಡ ಅವರು ಸೂಚಿಸಿದ್ದಾರೆ. ವಿವಿಐಪಿ ಭದ್ರತಾ ಜಾಲದೊಳಗೆ ಪ್ರವೇಶಿಸಿದ್ದು, ಕರ್ತವ್ಯ ನಿರತ ಪೊಲೀಸರ ವಿರುದ್ಧ ಏಕ ವಚನದಲ್ಲಿ ಮಾತನಾಡಿದ್ದು, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಮುಂತಾದ ಆರೋಪಗಳನ್ನು ವೆಂಕಟೇಶ್ ಪ್ರಸಾದ್ ಅವರ ಪತ್ನಿ ಜಯಂತಿ ಅವರ ಮೇಲೆ ಹೊರೆಸಲಾಗಿದೆ.
ಘಟನಾ ಸ್ಥಳದಲ್ಲಿದ್ದ ಎಸಿಪಿ, ಇನ್ಸ್ ಪೆಕ್ಟರ್ ಅವರು ಹೇಳಿಕೆಗಳನ್ನು ಆಧಾರಿಸಿ ಎಫ್ ಐಆರ್ ದಾಖಲಿಸಲಾಗುವುದು ಎಂದು ಡಿಸಿಪಿ ರವಿಕಾಂತೇ ಗೌಡ ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ರೀತಿ ಕಿರಿಕ್ ಮಾಮೂಲಿಯಾಗಿದೆ. ವಿಐಪಿ ವಾಹನ ನಿಲುಗಡೆ ಸ್ಥಳ ಚಿಕ್ಕದಾಗಿರುವುದರಿಂದ ಪಂದ್ಯ ನಂತರ ಆದಷ್ಟು ಬೇಗ ಸ್ಟೇಡಿಯಂ ನಿಂದ ವಾಹನ ಖಾಲಿ ಮಾಡಿಸಲು ಪೊಲೀಸರು ಮುಂದಾಗುತ್ತಾರೆ. ಆದರೆ,ವೆಂಕಟೇಶ್ ಪ್ರಸಾದ್ ಅವರ ಪತ್ನಿ ಸಮಾಧಾನವಾಗಿ ಪರಿಸ್ಥಿತಿ ನಿಭಾಯಿಸಬಹುದಿತ್ತು. ಎಲ್ಲಾ ಪೊಲೀಸರಿಗೆ ವೆಂಕಟೇಶ್ ಪ್ರಸಾದ್ ಎಂದ್ರೆ ಗೊತ್ತಿರುತ್ತಾ? ಕ್ಷುಲ್ಲಕ ವಿಷಯಕ್ಕೆ ಕಿತ್ತಾಟವಾಗಿದೆ, ಸೆಲೆಬ್ರಿಟಿಗಳು ಅಂತಾ ದೊಡ್ಡ ಸುದ್ದಿಯಾಗುತ್ತೆ ಅಷ್ಟೇ ಎಂದಿದ್ದಾರೆ.












Click it and Unblock the Notifications