ನೆಹರೂ ಯಾರು, Sonia class ಏನು?: ನಮೋ ನಮಃ

modi-takes-potshots-at-nehru-sonia-gandhi
ಅಹಮದಾಬಾದ್‌, ಮೇ5: ಗುಜರಾತ್ ಪ್ರಗತಿಯ ರೂವಾರಿ ಎಂದು ಕರೆಯಲ್ಪಡುವ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸೋನಿಯಾ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಲಿ ಕಾಂಗ್ರೆಸ್ಸಿನ ಅಧಿನಾಯಕಿ ಒತ್ತಟ್ಟಿಗಿರಲಿ ಜವಾಹರಲಾಲ್ ನೆಹರೂ ಎದುರೇ ತಮ್ಮ ರಾಜ್ಯ ಮಂಡಿಯೂರಲಿಲ್ಲ ಎಂದು ನಮೋ ಹೇಳಿದ್ದಾರೆ.

ನಾವಡಾ-ಬೊತಾಡ್ ನಡುವೆ 32 ಕಿ.ಮೀ. ಉದ್ದದ ನರ್ಮದಾ ನದಿ ಕೊಳವೆ ಮಾರ್ಗವನ್ನು ರಾಜ್ಯಕ್ಕೆ ಸಮರ್ಪಿಸುವ ಸಮಾರಂಭದಲ್ಲಿ ಶುಕ್ರವಾರ ಭಾವ್ ನಗರ ಜಿಲ್ಲೆಯ ಬೊತಾಡ್ ಪಟ್ಟಣದಲ್ಲಿ ಅವರು ಮಾತನಾಡುವಾಗ ಈ ಮಾತುಗಳನ್ನಾಡಿದ್ದಾರೆ.

'ಗುಜರಾತ್, ನೆಹರೂಗೆ ಜಗ್ಗಲಿಲ್ಲ-ಬಗ್ಗಲಿಲ್ಲ. ಅಂಥಾದ್ದರಲ್ಲಿ ಈ ಸೋನಿಯಾ ಯಾರು, Sonia class ಏನು? ನಾವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪೀಳಿಗೆಯವರು. ಯಾರಿಗೂ ನಾವು ತಲೆಬಾಗುವ ಮಾತೇ ಇಲ್ಲ' ಎಂದು ಬೃಹತ್ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಮೋ ಹೇಳಿದರು.

'ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ರಾಜ್ಯವೆಂದು ಗುಜರಾತ್ ಅಭಿವೃದ್ಧಿಗೆ ಆತ (ನೆಹರೂ) ಮನಸ್ಸು ಮಾಡಲಿಲ್ಲ. ಈಗ ಕೇಂದ್ರದ ರೈತ ವಿರೋಧಿ ನೀತಿಯು ದೇಶದ ರೈತರನ್ನು ನಾಶ ಮಾಡಿದೆ. ಹತ್ತಿ ರಫ್ತನ್ನು ನಿಷೇಧಿಸಿ, ಗುಜರಾತ್ ರೈತರನ್ನೂ ಸಂಹರಿಸಲು ಕೇಂದ್ರ ಯೋಜಿಸಿದೆ' ಎಂದು ಅವರು ವಿವರಿಸಿದರು.

'ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧವೂ ಹರಿಹಾಯ್ದಿರುವ ಮೋದಿ, ಪ್ರಧಾನಿ ಸಿಂಗ್ ನಿವಾಸ ಜನರೇಟರ್ ಸಹಾಯದಿಂದ ಕಾರ್ಯನಿರ್ವಹಿಸುತ್ತಿದೆ. 2007ರಲ್ಲಿ ಗುಜರಾತ್ ರೈತರಿಗೆ ನ್ಯಾಯಯುತವಾಗಿ ಸಂದಾಯವಾಗಬೇಕಿದ್ದ 200 ಮೆಗಾ ವ್ಯಾಟ್ ವಿದ್ಯುತ್ ಪಾಲನ್ನು ಮಹಾರಾಷ್ಟ್ರದತ್ತ ತಿರುವಿಸಿತು. ಆದರೆ ಗುಜರಾತ್ power-surplusನಿಂದ ಸ್ವಯಂ ಬೆಳಗುತ್ತಿರುವುದು ಅವರ ಕಣ್ಣಿಗೆ ರಾಚುತ್ತಿದೆ' ಎಂದು ಬಣ್ಣಿಸಿದರು.

ದೆಹಲಿಗೇ ವಿದ್ಯುತ್ ನೀಡುವಷ್ಟು ಗುಜರಾತ್ ಬಲಿಷ್ಠವಾಗಿದೆ. ಆದರೆ ದೆಹಲಿ (ವಿದ್ಯುತ್ ಸರಬರಾಜು) ಮಾರ್ಗಗಳು ದುರ್ಬಲವಾಗಿವೆ ಎಂದು ಅವರು ಕಟಕಿಯಾಡಿದ್ದಾರೆ. ಗುಜರಾತಿನಲ್ಲಿ ಚುನಾವಣೆಗಳನ್ನು ಗೆಲ್ಲಲು ಕೇಂದ್ರ ಸರಕಾರ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ರಾಜ್ಯದ ಜನರ ನೆಮ್ಮದಿಯನ್ನು ಹಾಳುಮಾಡಲು ಅದು ಯತ್ನಿಸುತ್ತಿದೆ. ತಕ್ಷಣ ಇದನ್ನು ನಿಲ್ಲಿಸಲಿ ಎಂದು ಮೋದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+