ಮಾಣಿಪ್ಪಾಡಿ, ಕನ್ನಡ ಪ್ರಭ ವಿರುದ್ಧ 1ಕೋಟಿ ರು ಕೇಸ್

ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಹಗರಣದ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಶಾಂತಿನಗರ ಶಾಸಕ ಹ್ಯಾರಿಸ್ ಅವರು ರಾಜಕೀಯ ದುರುದ್ದೇಶದಿಂದ ಮಾಣಿಪ್ಪಾಡಿ ಅವರು ದೂರು ದಾಖಲಿಸಿದ್ದಾರೆ. ಕಾಂಗ್ರೆಸ್ ಶಾಸಕ, ಸಚಿವರನ್ನು ತುಳಿಯುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಸರಕಾರದಿಂದಲೇ ವಕ್ಫ್ ಮಂಡಳಿ ಆಸ್ತಿ ಕಬಳಿಕೆಯಾಗಿದೆ. ಹೀಗಾಗಿ ಆಯೋಗದ ವರದಿಯ ಬಗ್ಗೆಯೇ ತನಿಖೆಯಾಗಲಿ ಎಂದು ಹ್ಯಾರಿಸ್ ಆಗ್ರಹಿಸಿದರು.
ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿಯ ದುರುಪಯೋಗದ ಅಧ್ಯಯನ ನಡೆಸಲು ರಚಿಸಲಾಗಿದ್ದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪಾಡಿ ಅವರು ತನಿಖೆ ನಡೆಸಿ, 8 ಸಾವಿರ ಪುಟಗಳ ವಿಶೇಷ ವರದಿಯನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಮಾರ್ಚ್ 26 ರಂದು ನೀಡಿದ್ದರು.












Click it and Unblock the Notifications