ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಐಟಿ ಟೆಕ್ಕಿಗಳಿಗೆ ವರವಾಗುತ್ತಿದೆ leave pooling

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  leave-pooling-it-techie-oriented-new-facility
  ಬೆಂಗಳೂರು, ಮೇ 5: ಅಯ್ಯೋ ರಜಾನೇ ಇಲ್ಲವಲ್ಲಾ ಎಂದು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವುದು ಬೇಡ. ಏಕೆಂದರೆ ಐಟಿ-ಬಿಟಿ ಕಂಪನಿಗಳಲ್ಲಿ ಈ ಸಂಬಂಧ ಹೊಸ ವಿದ್ಯಮಾನವೊಂದು ಕಂಡು ಬಂದಿದೆ. ಇದು ಉದ್ಯೋಗಿಗಳಿಗೆ ವರವಾಗಲಿದೆ.

  ಈ ಹಿಂದೆ ಚಾಲ್ತಿಗೆ ಬಂದ ಕಾರ್ ಪೂಲಿಂಗ್ ಎಂಬ ವ್ಯವಸ್ಥೆ ಎಷ್ಟು ಯಶಸ್ವಿಯಾಯಿತೋ ಐಟಿ ಮಂದಿಯೇ ಹೇಳಬೇಕು. ಆದರೆ ಈ ಮಧ್ಯೆ ಅಂತಹುದೇ ಮತ್ತೊಂದು ವ್ಯವಸ್ಥೆಯ ಮೊರೆ ಹೋಗಿದ್ದಾರೆ ಈ ಕಾರ್ಪೊರೇಟ್ ಜನ. ಅಂದರೆ ಟೆಕ್ಕಿಗಳು ತಮ್ಮ ರಜಾ ಅವಕಾಶಗಳನ್ನು ಪರಸ್ಪರ share ಮಾಡಿಕೊಳ್ಳುವುದೇ ಇದರ ಗುರಿ. ಅದುವೇ leave-pooling, leave- sharing.

  leave-pooling ವ್ಯವಸ್ಥೆಯಡಿ ಟೆಕ್ಕಿಗಳು ತಮ್ಮ ಖಾತೆಯಲ್ಲಿ ರಜೆ ಸೌಲಭ್ಯ ಖಾಲಿಯಾಗಿರುವಾಗ ಕಷ್ಟಕಾಲದಲ್ಲಿ ಸಹೋದ್ಯೋಗಿಗಳ ರಜೆಯನ್ನು ಬಳಸಿಕೊಳ್ಳಬಹುದು. Accenture India ಕಂಪನಿಯಲ್ಲಿ ಇಂತಹ ವ್ಯವಸ್ಥೆಯನ್ನು ಈಗಾಗಲೇ ಜಾರಿಯಲ್ಲಿದೆ. Accenture ಟೆಕ್ಕಿಗಳು ಇದಕ್ಕೆ hours that help ಎಂದೂ ನಾಮಕರಣ ಮಾಡಿದ್ದಾರೆ. ನಾನೂ-ನನ್ನದು ಎಂದೇ ಜೀವನ ಸವೆಸುವ ಟೆಕ್ಕಿಗಳಲ್ಲಿ ಇದು ಸಹಜೀವನ, ಹಂಚಿಕೆ ಸ್ವಭಾವವನ್ನು ಪ್ರೇರೇಪಿಸುತ್ತದೆ ಎಂದು ಆಶಿಸಲಾಗಿದೆ.

  ವೈದ್ಯಕೀಯ ತುರ್ತು ಸಂದರ್ಭ ಅಥವಾ ವೈಯಕ್ತಿಕ ಸಂಕಷ್ಟಗಳಲ್ಲಿ ಹೆಚ್ಚುವರಿ ರಜೆ ಪಡೆಯಲು ಟೆಕ್ಕಿಗಳಿಗೆ leave-pooling ವ್ಯವಸ್ಥೆ ವರದಾನವಾಗಲಿದೆ. ಇಂತಹ ಹೊಸ ಸಂಪ್ರದಾಯಕ್ಕೆ ಹೇತುವಾದ ಮುಖ್ಯ ಸಂಗತಿಯೆಂದರೆ ವರ್ಷಾಂತ್ಯದ ವೇಳೆಗೆ ಅನೇಕ ಟೆಕ್ಕಿಗಳ ಖಾತೆಯಲ್ಲಿ ರಜೆ ದಿನಗಳು ಹಾಗೇ ಉಳಿದಿರುವುದನ್ನು ಕಂಡು ಇಂತಹ ಹೊಸ ವ್ಯವಸ್ಥೆಗೆ ಜೋತುಬೀಳಲಾಗಿದೆ.

  ತುರ್ತು ಸಂದರ್ಭಗಳಲ್ಲಿ ಮುಂಗಡ ರಜೆ ಪಡೆಯಲು ಅವಕಾಶವಿದೆಯಾದರೂ leave-pooling ವ್ಯವಸ್ಥೆಯಲ್ಲಿನ goodwill, understanding ಮತ್ತು bonding factorಗೆ ಸರಿಸಾಟಿಯಿಲ್ಲ. ಇದರಿಂದ ಕ್ಯಾಂಪಸ್ಸಿನಲ್ಲಿ ಸಕಾರಾತ್ಮಕ, ಸೌಹಾರ್ದ ವಾತಾವರಣ ನೆಲೆಸುತ್ತದೆ ಎಂದು ವಿಶ್ಲೇಷಿಸಲಾಗಿದೆ. Accenture ಈ ವ್ಯವಸ್ಥೆ ಯಶಸ್ವಿಯಾಗಿದ್ದು, ಇತರೆ ಐಟಿ-ಬಿಟಿ ಕಂಪನಿಗಳೂ ಇದೇ ಹಾದಿಯಲ್ಲಿ ಸಾಗುವ ದಿನಗಳು ದೂರವಿಲ್ಲ ಎನ್ನಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The latest on the sharing front in IT industry is leave-pooling. Through the system, techies can quite literally, bank on. An innovation by a corporate, the scheme allows employees to donate their excess leave to their colleagues who may need it in times of crisis. Accenture India adopts Hours That Help.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more