ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ವಿಮಾ ಏಜೆಂಟ್ಸ್ ಗೆ ಪಿಂಕ್ ಸ್ಲಿಪ್

By Srinath
|
Google Oneindia Kannada News

insurers-give-pink-slip-to-3point5-lakh-agents
ಬೆಂಗಳೂರು,ಮೇ 5: ಮನ, ಮನೆಗೆ ತೆರಳಿ ವಿಮಾ ಪಾಲಿಸಿಗಳನ್ನು ಹೊತ್ತುತರುವ ಕಾಯಕದಲ್ಲಿ ಸುಮಾರು 3.5 ಲಕ್ಷ ಮಂದಿ life insurance agentಗಳನ್ನು ವಿಮಾ ಕಂಪನಿಗಳು ಮನೆಗೆ ಕಳಿಸಿವೆ. ಜೀವ ವಿಮೆ ಬಿಸಿನೆಸ್ ಕ್ಷೀಣಿಸುತ್ತಿರುವುದು ಮತ್ತು ವಿಮೆ ವೆಚ್ಚಗಳು ಅಧಿಕವಾಗುತ್ತಿರುವುದನ್ನು ನೆಪವಾಗಿಸಿಕೊಂಡ ಕಂಪನಿಗಳು ಅನುತ್ಪಾದಕ ಏಜೆಂಟುಗಳಿಗೆ ಪಿಂಕ್ ಸ್ಲಿಪ್ ವಿತರಿಸಿವೆ. ಇದರಿಂದ ಅಸಂಖ್ಯಾತ ಏಜೆಂಟುಗಳ ಭವಿಷ್ಯ ಭದ್ರವಾಗಿದೆ.

ಏಜೆಂಟುಗಳಿಂದ ಹೆಚ್ಚಿನ ಕಾರ್ಯಕ್ಷಮತೆ ನಿರೀಕ್ಷಿಸಿ, ಕಳೆದ ವರ್ಷ ವಿಮಾ ಕಂಪನಿಗಳೇ ಲಕ್ಷಾಂತರ ಮಂದಿಯನ್ನು ಮನೆಗೆ ಕಳಿಸಿವೆ. ಉಳಿದಂತೆ ಹಲವರು ಸ್ವಇಚ್ಛೆಯಿಂದ ಉದ್ಯೋಗ ತೊರೆದಿದ್ದಾರೆ. ಇನ್ನು ಕೆಲವರಿಗೆ ಕಂಪನಿಗಳ target ಗಳು ಹಿಮಾಲಯದಂತೆ ಭಾಸವಾಗಿ ಅರ್ಧದಲ್ಲೇ ಪ್ರಯತ್ನ ಕೈಬಿಟ್ಟಿದ್ದಾರೆ. ಅಂದಹಾಗೆ, ವಿಮಾ ಕ್ಷೇತ್ರದಲ್ಲಿ ದೇಶದಲ್ಲಿ ಸುಮಾರು 26 ಲಕ್ಷ ಏಜೆಂಟುಗಳು ಸಕ್ರಿಯರಾಗಿದ್ದಾರೆ.

ಇನ್ನು, ಸ್ವತಃ ಏಜೆಂಟುಗಳಿಗೇ ಈ ಉದ್ಯೋಗ ಹೆಚ್ಚು ಉತ್ಪಾದಕ ಅನಿಸಿಲ್ಲವಾದ್ದರಿಂದ ಇತ್ತೀಚಿನ ವರ್ಷಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಈ ಉದ್ಯೋಗವನ್ನು ಬಿಟ್ಟಿದ್ದಾರೆ. ಈ ಮಧ್ಯೆ, ವಿಮಾ ನಿಯಂತ್ರಣ (irda) ಮಂಡಳಿಯು insurance agent ಗಳಿಗಾಗಿ ಇಲಾಖಾ ಪರೀಕ್ಷೆಗಳನ್ನು ಕಠಿಣಗೊಳಿಸಿದೆ. ಕಳೆ ಅಕ್ಟೋಬರಿನಲ್ಲಿ ಈ ಪರೀಕ್ಷೆ ಎದುರಿಸಲಾಗದೆ ಅರ್ಧಕ್ಕೇ ಎದ್ದು ಹೋಗಿದ್ದಾರೆ.

ಹೇಳಬೇಕೆಂದರೆ, ಈ insurance agentಗಳೇ ವಿಮೆ ಬಿಸಿನೆಸ್ಸಿಗೆ ಬೆನ್ನೆಲುಬು. ಆದರೆ ಆ ಬೆನ್ನೆಲುಬು ಈಗ ಪೆಡು'ಸಾಗುತ್ತಿದೆ'.

English summary
About 3.5 lakh agents have left the life insurance industry in the last fiscal, according to the Life Insurance Industry sources about half of these have been sacked by the companies over performance issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X