CEC: ಯಡಿಯೂರಪ್ಪ ತನಿಖೆ ತೀರ್ಪು ಮುಂದಿನ ವಾರಕ್ಕೆ
ನವದೆಹಲಿ,
ಮೇ 4: ಗಣಿ ಲಂಚ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಬೇಕೇ, ಬೇಡವೇ ಎಂಬುದರ ಬಗ್ಗೆ ಶುಕ್ರವಾರ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್, ತನ್ನ ಆದೇಶವನ್ನು ನಾಳೆಗೆ ಮುಂದೂಡಿದೆ. id="toptextpromo">ಯಡಿಯೂರಪ್ಪ
ಪರ ವಕೀಲ ಗಿರೀಶ್ ಪ್ರತಿವಾದ ಮಂಡಿಸಿದರೆ, ಸಿಇಸಿ ಪರ ಶ್ಯಾಂ ದಿವಾನ್ ವಾದ ಮಂಡಿಸಿದರು. ಆದರೆ ಇನ್ನೂ ಹೆಚ್ಚಿನ ಅಂಶಗಳನ್ನು ಸಲ್ಲಿಸಲು ಎರಡೂ ಕಡೆಯವರಿಗೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್, ಶನಿವಾರ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಒಂದು ಹಂತದಲ್ಲಿ, ಯಡಿಯೂರಪ್ಪ ವಕೀಲ ಗಿರೀಶ್ ವಾದ ಸರಣಿಗೆ ಮುಖ್ಯ ನ್ಯಾಯಮೂರ್ತಿ ಕಪಾಡಿಯಾ ನೇತೃತ್ವದ ಅರಣ್ಯ ಪೀಠ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. id='are-slot-1' class='oiad oi-axt oiadv'> id='top-searched-articles'>ಪ್ರಸ್ತುತ
ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪ ಅವರು ನ್ಯಾಯಾಂಗದಲ್ಲಿ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇಂದಿನ ಬೆಳವಣಿಗೆಗಳ್ನು ಗಮನಿಸಿದರೆ ಯಡಿಯೂರಪ್ಪ ಅವರು ಸದ್ಯಕ್ಕೆ ಅಂದರೆ ಇನ್ನೊಂದೂವರೆ ತಿಂಗಳು ಸಿಬಿಐ ತನಿಖೆಯ ತೂಗುಗತ್ತಿಯಿಂದ ಪಾರಾಗಿರುವಂತಿದೆ.











Click it and Unblock the Notifications