ಐಐಎಂ ವಿದ್ಯಾರ್ಥಿಗೆ 53 ಲಕ್ಷ ರು ಸಂಬಳದ ಆಫರ್

2012-12ರ ಬ್ಯಾಚಿನ ವಿದ್ಯಾರ್ಥಿಗಳಿಗೆ ಲಕ್ಷಾಂತರ ರುಪಾಯಿ ಸಂಬಳದ ಆಫರ್ ಗಳು ಸಿಕ್ಕಿದೆ. ಒಬ್ಬ ವಿದ್ಯಾರ್ಥಿಗೆ ಸಿಂಗಪುರ ಸಂಸ್ಥೆಯಿಂದ 52 ಲಕ್ಷ ರು ಆಫರ್ ಬಂದಿದ್ದರೆ, ಇನ್ನೊಬ್ಬ ವಿದ್ಯಾರ್ಥಿಗೆ ಯುರೋಪ್ ಬ್ಯಾಂಕಿನಿಂದ 32 ಲಕ್ಷ ರು ಸಂಬಳದ ಆಫರ್ ಬಂದಿದೆ ಎಂದು ಐಐಎಂ ಇಂದೋರ್ ಸುದ್ದಿಯನ್ನು ಖಚಿತಪಡಿಸಿದೆ. ಆದರೆ, ವಿದ್ಯಾರ್ಥಿಗಳ ವಿವರಗಳನ್ನು ಮಾತ್ರ ಬಹಿರಂಗಪಡಿಸಿಲ್ಲ.
2010-12ನೇ ಸಾಲಿನ Post Graduate Programme (PGP) ವಿದ್ಯಾರ್ಥಿಗಳಲ್ಲಿ ಒಟ್ಟು 443 ಜನ ಸಂದರ್ಶನಕ್ಕೆ ಹಾಜರಾಗಿದ್ದರು. ಅವರಲ್ಲಿ 434 ಜನರ ನೇಮಕಾತಿ ಆಗಿದೆ ಎಂದು ಐಐಎಂ-ಐ ಹೇಳಿದೆ.
ಒಟ್ಟು 136 ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸಲು ಬಂದಿದ್ದವು. ಕಳೆದ ವರ್ಷ 32 ಲಕ್ಷ ರು ವಾರ್ಷಿಕ ಸಂಬಳ ನೀಡಿದ್ದು ದಾಖಲೆಯಾಗಿತ್ತು. ಈ ಬಾರಿ ಅದನ್ನು ಮೀರಿಸಿದ ಆಫರ್ ಗಳು ಬಂದಿದೆ ಎಂದು ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಇಂದೋರ್ ಪ್ರಕಟಿಸಿದೆ.












Click it and Unblock the Notifications