• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಮೇಶ್ ಕುಮಾರ್ ಒತ್ತುವರಿ ಮಾಡಿದ್ದ ಭೂಮಿ ತೆರವು

By * ಶ್ರೀನಿವಾಸಮೂರ್ತಿ, ಕೋಲಾರ
|
ಶ್ರೀನಿವಾಸಪುರ, ಮೇ 2 : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗು ಅವರ ಅನುಮಾಯಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಸುಮಾರು 200 ಎಕರೆ ಅರಣ್ಯ ಭೂಮಿಯನ್ನು ಪೊಲೀಸ್ ಇಲಾಖೆ ಸಹಕಾರದೊಂದೊಗೆ ಅರಣ್ಯ ಅಧಿಕಾರಿಗಳು ಎರಡು ದಿನಗಳ ಕಾಲ ಕಾರ್ಯಚರಣೆ ನಡಸಿ ತೆರವು ಗೊಳಿಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಂಧ್ರದ ಗಡಿಯಂಚಿನಲ್ಲಿರುವ ರಾಯಲ್ಪಾಡು ಹೋಬಳಿಯ ಯಡಗಾನಹಳ್ಳಿ ಮಜರಾ ಹೊಸಹೂಡ್ಯ ಗ್ರಾಮದ ಜಿನಗಲಕುಂಟ ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶದ ಸುಮಾರು 120 ಎಕರೆ ಗೊಮಾಳದಲ್ಲಿ ರಮೇಶಕುಮಾರ್ 63.3 ಎಕರೆ ಹಾಗು ಅವರ ಅನುಯಾಯಿ ರೆಡ್ಡಪ್ಪ ಹಾಗು ಇತರರು 140 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು 2006ರಲ್ಲಿ ಸಾರ್ವಜನಿಕ ದೂರು ದಾಖಲಾಗಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆದು ವರದಿ ದಾಖಲಿಸಲಾಗಿದ್ದರೂ ಯಾವುದೆ ರೀತಿಯ ಕ್ರಮ ಜರುಗಿಸದೆ ನಿರ್ಲಕ್ಷಿಸಲಾಗಿದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ, ಕರ್ನಾಟಕದ ಸಾರ್ವಜನಿಕ ಭೂಮಿಯನ್ನು ಹಿಂದಕ್ಕೆ ಪಡೆದು ಸಂರಕ್ಷಿಸುವ ಸಲುವಾಗಿ ರಚನೆಯಾಗಿರುವ ಕಾರ್ಯಪಡೆ ಅಧ್ಯಕ್ಷರಾದ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ ಬಾಲಸುಬ್ರಮಣ್ಯಂ ನೇತೃತ್ವದಲ್ಲಿ ರಾಜ್ಯಾದ್ಯಂತ 12 ಲಕ್ಷ ಎಕರೆ ಜಮೀನು ಒತ್ತುವರಿ ಮಾಡಿರುವುದನ್ನು ಪತ್ತೆ ಹಚ್ಚಿದ್ದರು.

ಅದರಲ್ಲಿ ರಮೇಶಕುಮಾರ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಪತ್ತೆ ಹಚ್ಚಲಾಗಿತ್ತು. ಇದರನ್ವಯ ರಮೇಶ್ ಕುಮಾರ್ ವಿರುದ್ದ ಅರಣ್ಯ ಕಾಯ್ದೆಯಡಿ ದೂರು ದಾಖಲಾಗಿತ್ತು. ಅದರೂ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಬಳ್ಳಾರಿಯ ಅಕ್ರಮ ಗಣಿ ಭೂಮಿ ಒತ್ತುವರಿಯನ್ನು ಸರ್ವೆ ಮಾಡಿ ವರದಿ ಮಾಡಿದ್ದ ಯುವಿ ಸಿಂಗ್ ನೇತೃತ್ವದಲ್ಲಿ 2007ರಲ್ಲಿ ರ್ವೆ ನಡಸಲಾಯಿತು. ಆದರಲ್ಲೂ ರಮೇಶಕುಮಾರ ಒತ್ತುವರಿ ಮಾಡಿಕೊಂಡಿರುವುದು ದೃಡಪಟ್ಟಿತ್ತು.

ಹರ್ಷ ಹೈಟೆಕ್ ಮ್ಯಾಂಗೋ ಫಾರ್ಮ್ : ಒತ್ತುವರಿ ಮಾಡಿಕೊಂಡಿರುವ ಜಮೀನಿನಲ್ಲಿ ಮಾಜಿ ಸ್ಪೀಕರ್ ರಮೇಶಕುಮಾರ ಮಾವಿನ ಗಿಡಗಳನ್ನು ನೆಟ್ಟು ಹೈಟೆಕ್ ತೋಟಗಾರಿಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ವಿಶ್ರಾಂತಿ ಧಾಮ ಮತ್ತು ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಲು ಸಭಾಂಗಣ ನಿರ್ಮಿಸಿ, ಪುಟ್ಟದೊಂದು ದೇವಾಲಯ ಸಹ ನಿರ್ಮಿಸಿರುತ್ತಾರೆ. ಈ ಜಮೀನಿಗೆ ತಮ್ಮ ಮಗ ಹರ್ಷ ಅವರ ಹೆಸರು ಬಳಸಿ ಹರ್ಷ ಹೈಟೆಕ್ ಮ್ಯಾಂಗೋ ಫಾರ್ಮ್ ಎಂದು ಹೆಸರಿಟ್ಟಿದ್ದಾರೆ.

ರಮೇಶ್ ಕುಮಾರ್ ಈಗ ಏನು ಮಾಡುತ್ತಿದ್ದಾರೆ? :
ಟಿಎನ್ ಸೀತಾರಾಂ ಅವರ 'ಮುಕ್ತ ಮುಕ್ತ' ಧಾರಾವಾಹಿಯಲ್ಲಿ ರಮೇಶ್ ಕುಮಾರ್ ಅವರು, ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಕಾರಣಿಗಳ ವಿರುದ್ಧ ಹೋರಾಡುವ ಪ್ರಾಮಾಣಿಕ ರಾಜಕಾರಣಿಯ ಪಾತ್ರ ನಿರ್ವಹಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Forest land in Kolar district, alleged encroached by former Speaker of Karnataka Assembly Ramesh Kumar has been recovered by forest department.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more