ಆಂಧ್ರ ಭೀಕರ ಅಪಘಾತ: ರಾಜ್ಯದ 11 ಮಂದಿ ಸಾವು
ಕರ್ನೂಲ್,
ಮೇ.1: ಜಿಲ್ಲೆಯ ಶ್ರೀಶೈಲದಿಂದ ಮಹಾನಂದಿ ದೇಗುಲದ ಕಡೆಗೆ ತೆರಳುತ್ತಿದ್ದ ಕ್ವಾಲಿಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ದೇವರ ದರ್ಶನಕ್ಕೆ ಕ್ವಾಲೀಸ್ ವಾಹನದಲ್ಲಿ ತೆರಳಿದ್ದ ಕರ್ನಾಟಕದ ಮಂದಿ ದುರಂತ ಸಾವನ್ನಪ್ಪಿದ್ದಾರೆ. id="toptextpromo">ಕರ್ನೂಲಿನ
ಆತ್ಮಕೂರಿನ ನಲ್ಲ ಕಾಲುವೆ ಬಳಿ ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು, ನಾಲ್ವರು ಗಂಡಸರು ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅಪಘಾತದ ಭೀಕರತೆ ಕಂಡು ಸ್ಥಳೀಯರು ಬೆಚ್ಚಿದ್ದಾರೆ. id='are-slot-1' class='oiad oi-axt oiadv'> id='top-searched-articles'>KA
04 MD 5559 ಸಂಖ್ಯೆಯ ಕ್ವಾಲಿಸ್ ವಾಹನ ದಾಖಲೆ ಹಾಗೂ ಘಟನಾ ಸ್ಥಳದಲ್ಲಿದ್ದ ಚೆಲ್ಲಾ ಪಿಲ್ಲಿಯಾಗಿದ್ದ ದೇಹಗಳ ಬಳಿ ಇದ್ದ ಮೊಬೈಲ್ ಫೋನ್ ನಂಬರ್ ಪ್ರಕಾರ ಮೃತರು ಯಶವಂತಪುರ ಬಳಿಯವರು ಎಂದು ಅಂದಾಜಿಸಲಾಗಿದೆ. ಮೃತ ದೇಹಗಳ ಪತ್ತೆ ಇನ್ನೂ ಆಗಿಲ್ಲ ಎಂದು ಕರ್ನೂಲು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.











Click it and Unblock the Notifications