ಐಪಿಎಲ್ : ವಿದ್ಯಾರ್ಥಿ ರಿಚರ್ಡ್ ಸಾವು, ಪ್ರತಿಭಟನೆ

ಮಣಿಪುರ ಮೂಲದ ರಿಚರ್ಡ್ ಲೊಯತಮ್ ಮಾರಣಾಂತಿಕ ಹಲ್ಲೆಗೊಳಗಾಗಿದ್ದು ಆತನ ಕುಟುಂಬ ವರ್ಗ ಹಾಗೂ ಗೆಳೆಯರನ್ನು ಕೆರಳಿಸಿದೆ. ದೆಹಲಿಯ ಜಂತರ್ ಮಂತರ್ ಬಳಿ ಸೇರಿದ ಅನೇಕ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ನ್ಯಾಯ ನೀಡುವಂತೆ ಆಗ್ರಹಿಸಿದರು.
ಸರ್ಕಾರ ಕೈ ಕಟ್ಟಿ ಕೂತಿದೆ. ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಏಕೆ ಎಂದು ರಿಚರ್ಡ್ ಸಂಬಂಧಿಕ ಅಲ್ಶಿ ಶರ್ಮ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ವಿದ್ಯಾರ್ಥಿಗಳು ಮೇಣದ ಬತ್ತಿ ಹಚ್ಚಿಕೊಂಡು ಮೌನ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ. ಬೆಂಗಳೂರಿನ ಟೌನ್ ಹಾಲ್ ಬಳಿ ಕೂಡಾ ಭಾನುವಾರ (ಏ.29) ಆಚಾರ್ಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಈ ಪ್ರಕರಣದ ಪ್ರಮುಖ ಆರೋಪಿ ಬ್ಯಾಂಕಾಕ್ ಗೆ ಪರಾರಿಯಾಗಿರುವ ಸುದ್ದಿ ಸಿಕ್ಕಿದೆ. ಕರ್ನಾಟಕ ಸರ್ಕಾರದಿಂದ ನ್ಯಾಯ ಸಿಗದಿದ್ದರೆ ಸಿಬಿಐಗೆ ಪ್ರಕರಣ ಒಪ್ಪಿಸುವಂತೆ ಕೇಂದ್ರ ಸರ್ಕಾರವನ್ನು ಒಪ್ಪಿಸಲಾಗುವುದು ಎಂದು ರಿಚರ್ಡ್ ಅವರ ತಾಯಿ ಡಾ. ವಿದ್ಯಾಬಾಲಿ ದೇವಿ ಹೇಳಿದ್ದಾರೆ.












Click it and Unblock the Notifications