ಸಸ್ಪೆಂಡ್ ಆದ ಜೈಲರ್ ಲಕ್ಷ್ಮಿನಾರಾಯಣ ನಾಪತ್ತೆ

ಸೋಮವಾರ (ಏ.23) ಸರ್ಕಾರ ಆದೇಶ ಹೊರಡಿಸಿ, ಮುಖ್ಯ ಜೈಲು ಸೂಪರ್ ರಿಂಟೆಂಡ್ ಟಿಎಚ್ ಲಕ್ಷ್ಮಿನಾರಾಯಣ ಹಾಗೂ ಅವರ ಸಹಾಯಕಿ ಡಾ. ಅನಿತಾ ಅವರನ್ನು ಅಮಾನತುಗೊಳಿಸಿತ್ತು.
ಅಮಾನತು ಆದೇಶದ ಪ್ರಶ್ನಿಸಿದ ಈ ಇಬ್ಬರು Karnataka Administrative Tribunal (KAT) ಗೆ ಮನವಿ ಸಲ್ಲಿಸಿದ್ದರು. ಆದರೆ, ಈ ನಡುವೆ ಲಕ್ಷ್ಮಿನಾರಾಯಣ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆಗಾಗಿ ಲಕ್ಷ್ಮಿನಾರಾಯಣ ಅವರನ್ನು ಬಂಧಿಸಲು ಪೊಲೀಸರು ಮುಂದಾದರು. ಈ ಸುದ್ದಿ ತಿಳಿದ ಲಕ್ಷ್ಮಿನಾರಾಯಣ ಅವರು ನಾಪತ್ತೆಯಾಗಿದ್ದಾರೆ.
ಮಸೂದ್ ನನ್ನು ಅಕ್ರಮವಾಗಿ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಕರಿಸಿ, ಕರ್ತವ್ಯ ಲೋಪ ಎಸೆಗಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಎ ಆರ್ ಅಶೋಕ್ ಕುಮಾರ್ ಅಡಿಗ ಅವರು ಆರೋಪಿಸಿದ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿತ್ತು.












Click it and Unblock the Notifications