ಜೈಲಿನಲ್ಲೇ ಗಾಲಿ ಜನಾರ್ದನ ರೆಡ್ಡಿ ಮೇ ಡೇ ಆಚರಣೆ

ಏ.27ಕ್ಕೆ ಇಬ್ಬರ ನ್ಯಾಯಾಂಗ ಬಂಧನ ಕೊನೆಗೊಂಡಿತು. ಎಎಂಸಿ ಹಾಗೂ ಡೆಕ್ಕನ್ ಗಣಿ ಕಂಪನಿ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಾಲಿ ರೆಡ್ಡಿ ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರ (ಏ.17) ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು.
ಹೆಚ್ಚಿನ ವಿಚಾರಣೆ ಅಗತ್ಯತೆ ಇರುವುದರಿಂದ ಆರೋಪಿಗಳಿಗೆ ಈ ಸಂದರ್ಭದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ. ಸಿಬಿಐ ತಂಡ ಕೂಡಾ ವಿಚಾರಣೆ ವಿಳಂಬ ಮಾಡದೆ ಆದಷ್ಟೂ ಬೇಗ ದಾಖಲೆಗಳನ್ನು ಸಂಗ್ರಹಿಸಿ, ಸಲ್ಲಿಸುವಂತೆ ಸಿಬಿಐ ಕೋರ್ಟ್ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.
ಗಾಲಿ ರೆಡ್ಡಿ ಟೈಮ್ ಸರಿಯಿಲ್ಲ: ಸುಮಾರು ಐದಾರು ಬಾರಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಜಾಗೊಂಡಿದೆ. ತಮ್ಮ ಮೇಲಿನ ಆರೋಪ ನಿರಾಧಾರವಾಗಿದೆ. ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ಗೆ ಮೇಲ್ಮನವಿ ಕೂಡಾ ಸಲ್ಲಿಸಿದ್ದಾರೆ. ಆದರೂ, ಒಮ್ಮೆ ಕೂಡಾ ರೆಡ್ಡಿಯನ್ನು ಜೈಲಿನಿಂದ ಹೊರಬಿಡಬಲ್ಲ ಅಂಶಗಳು ಸಿಕ್ಕಿಲ್ಲ.
ಬಾಡಿ ವಾರೆಂಟ್ ಪಡೆದು ವಿಚಾರಣೆಗಾಗಿ ಬೆಂಗಳೂರು ಸೇರಿರುವ ಗಾಲಿ ರೆಡ್ಡಿ ಅವರು ಮತ್ತೊಮ್ಮೆ ಹೈದರಾಬಾದಿನ ಚಂಚಲಗೂಡ ಜೈಲಿಗೆ ಕಾಲಿಡುವುದಿಲ್ಲ ಎಂದಿದ್ದಾರೆ.












Click it and Unblock the Notifications