ರಾಜ್ಯಸಭೆ ನಿವೃತ್ತರಿಗೆ, ಸಚಿನ್‌ಗಲ್ಲ : ಹೇಮಾ ಮಾಲಿನಿ
ಕರ್ನಾಟಕದಿಂದ ಕಳೆದ ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ 63 ವರ್ಷದ ಚಿರಯವತಿ 'ಡ್ರೀಮ್ ಗರ್ಲ್' ಹೇಮಾ ಮಾಲಿನಿ ಅವರು, "ರಾಜ್ಯಸಭೆ ಇರುವುದು ನಿವೃತ್ತರಿಗೆ ಮಾತ್ರ. ಸಚಿನ್ ಇನ್ನೂ ನಿವೃತ್ತಿಯಾಗಿಲ್ಲ ಎಂದು ಅಂದುಕೊಂಡಿದ್ದೇನೆ. ಹಾಗೆಯೆ, ರಾಜ್ಯಸಭೆಯಲ್ಲಿ ಅವರಿಗೆ ಬೋರು ಹೊಡೆಯಲಿಕ್ಕಿಲ್ಲ" ಎಂದು ವ್ಯಂಗ್ಯಭರಿತ ಮಾತಿನಲ್ಲಿ ವಸ್ತುಸ್ಥಿತಿಯನ್ನು ಸಚಿನ್ ಮುಂದೆ ತೆರೆದಿಟ್ಟಿದ್ದಾರೆ.
ಸಚಿನ್ ನಾಮನಿರ್ದೇಶನವನ್ನು ಬಾಲಿವುಡ್ (ಮಾಜಿ) ನಿರ್ದೇಶಕ ಮಹೇಶ್ ಭಟ್ ಅವರು ಸ್ವಾಗತಿಸಿದ್ದಾರೆ. "ಸಚಿನ್ ಒಬ್ಬ ಮಹಾನ್ ವ್ಯಕ್ತಿ. ಅವರು ಮಹಾನ್ ಆಗಿದ್ದಕ್ಕೇ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಯಶಸ್ಸು ಅವರನ್ನು ಅಲ್ಲಿಯೂ ಹಿಂಬಾಲಿಸುತ್ತದೆ ಎಂದು ಆಶಿಸುತ್ತೇನೆ" ಎಂದು ಅವರು ನುಡಿದಿದ್ದಾರೆ.
ಆದರೆ, ಸಚಿನ್ ಅವರ ಆಯ್ಕೆಯಿಂದ ತೀವ್ರ ಆಘಾತ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟ್ ಪಟು ಸಂಜಯ್ ಮಾಂಜ್ರೇಕರ್ ಅವರು, "ಸಚಿನ್ ಅವರನ್ನು ನಾಮನಿರ್ದೇಶನ ಮಾಡಿರುವ ಸುದ್ದಿ ಆಘಾತಕರ. ಆ ನಾಮನಿರ್ದೇಶನವನ್ನು ಸಚಿನ್ ಒಪ್ಪಿಕೊಂಡಿದ್ದು ಮತ್ತೂ ಆಘಾತಕರ. ಸಚಿನ್ ಕ್ರಿಕೆಟ್ ಅಂಕಣದಲ್ಲಿ ಸಾಧಿಸಬೇಕಾಗಿರುವುದು ಇನ್ನೂ ಸಾಕಷ್ಟಿದೆ" ಎಂದಿದ್ದಾರೆ.
ಸಚಿನ್ ಅವರ ಆಯ್ಕೆಯ ಬಗ್ಗೆ ಟ್ವಿಟ್ಟರ್‌ನಲ್ಲಿಯೂ ಭಾರೀ ಚರ್ಚೆ ನಡೆದಿದೆ. ಹೆಚ್ಚಿನವರು ಇದಕ್ಕೆ ವಿರೋಧವಾಗಿದ್ದಾರೆ. ಕ್ರಿಕೆಟ್‌ಗೆ ಸಚಿನ್ ಅವರ ಸೇವೆ ಇನ್ನೂ ಬೇಕಾಗಿದೆ. ಅವರು ರಾಜಕೀಯ ಪ್ರವೇಶಿಸುತ್ತಿರುವುದು ಊಹಿಸಲೂ ಅಸಾಧ್ಯವಾಗಿದೆ ಎಂದು ಹಲವರು ಹೇಳಿದ್ದರೆ, ಸಚಿನ್‌ರಂಧ ಸಜ್ಜನರು ರಾಜಕೀಯಕ್ಕೆ ಬರಬೇಕು ಎಂದು ಕೆಲವರು ಟ್ವೀಟಿಸಿದ್ದಾರೆ. ಒನ್ಇಂಡಿಯಾ ಕನ್ನಡದಲ್ಲಿ, ಸಚಿನ್ ಯಾವ ಪಕ್ಷ ಸೇರಬೇಕು ಎಂದು ಕೇಳಿದ ಪ್ರಶ್ನೆಗೆ ಯಾವುದೂ ಬೇಡ ಎಂದು ಬಹುಸಂಖಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಪಿಟಿಐ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ













Click it and Unblock the Notifications