ಮದುರೈ ಆಧೀನಂ ಮಠಾಧಿಪತಿಯಾಗಿ ಸ್ವಾಮಿ ನಿತ್ಯಾನಂದ

ಮದುರೈನ ಆಧೀನಂ ಮಹಾಸಂಸ್ಥಾನ ಮಠಕ್ಕೆ 1400 ವರ್ಷಗಳ ಇತಿಹಾಸವಿದೆ. ಮಠಾಧಿಪತಿಗಳಾಗಿ ಕಾರ್ಯನಿರ್ವಹಿಸುವವರೆಲ್ಲರೂ ಸಮಾಜಕ್ಕೆ ತಮ್ಮದೇ ಆದ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ. ವಿಶ್ವದಾದ್ಯಂತ ಆಧೀನಂ ಮಹಾಸಂಸ್ಥಾನ ಮಠದ ಅಂಗ ಮಠಗಳು ಇವೆ. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಆಧೀನಂ ಮಠಕ್ಕೆ ಬಿಡದಿ ಧ್ಯಾನಪೀಠಂನ ಸ್ವಾಮೀಜಿ ನಿತ್ಯಾನಂದ ಮಠಾಧಿಕಾರಿಯಾಗಿ ನೇಮಕಗೊಂಡಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ.
ಕಿವಿ ತುಂಬಿ ತುಳುಕಿದ ನಿತ್ಯಾ ಗುಣಗಾನ : ನಿತ್ಯಾನಂದರಿಗೆ ನೇಮಕ ಪತ್ರವನ್ನ ಅರುಣಗಿರಿನಾಥಶ್ರೀಗಳು ಹಸ್ತಾಂತರಿಸಿದರು. ಚಿನ್ನಲೇಪಿತ ಕಿರೀಟವನ್ನು ಸ್ವಾಮೀಜಿಗಳು ಪರಸ್ಪರ ಬದಲಾಯಿಸಿಕೊಂಡು ಅಧಿಕೃತವಾಗಿ ಆಧೀನಂ ಮಠದ ಮಠಾಧಿಪತಿಯಾಗಿ ನಿತ್ಯಾನಂದ ಅಧಿಕಾರ ಸ್ವೀಕರಿಸಿದರು. ಪೂರ್ವಸಿದ್ಧತೆ ನಡೆಸಿಕೊಂಡು ಬಂದಿದ್ದ ಅರುಣಗಿರಿನಾಥಶ್ರೀಗಳು ನಿತ್ಯಾನಂದನ ಬಗ್ಗೆ ಸುಮಾರು 2 ಗಂಟೆಗಳ ಕಾಲ ಪುಂಖಾನುಪುಂಖವಾಗಿ ಗುಣಗಾನ ಮಾಡಿದರು. ನಿತ್ಯಾನಂದ ಕೂಡ ಹೆಚ್ಚಿನ ಜವಾಬ್ಧಾರಿಯಿಂದ ಪುಳಕಿತರಾಗಿ ಆಧೀನಂ ಸ್ವಾಮೀಜಿಗೆ ರಾಜಾತಿಥ್ಯ ನೀಡಿದರು.
ನಿತ್ಯಾನಂದ ವಿಶ್ವದ ಮಹಾನ್ ದಾರ್ಶನಿಕ ವ್ಯಕ್ತಿ, ಮನುಕುಲವನ್ನೇ ಉದ್ದಾರ ಮಾಡಲಿಕ್ಕೆ ದೇವಲೋಕದಿಂದ ಶಿವನೇ ಭುವಿಯ ರಾಯಭಾರಿಯಾಗಿ ಕಳುಹಿಸಿಕೊಟ್ಟಿದ್ದಾನೆ. ಪಾರ್ವತಿಪುತ್ರನಾಗಿರುವ ನಿತ್ಯಾನಂದ ಎಂಜಿನಿಯರ್‌ಗೆ ಎಂಜಿನಿಯರ್ ಆಗಿ, ಡಾಕ್ಟರ್‌ಗಳಿಗೆ ಡಾಕ್ಟರ್ ಆಗಿ, ಪ್ರೆಸಿಡೆಂಟ್‌ಗೆ ಪ್ರೆಸಿಡೆಂಟ್ ಆಗಿ, ಪ್ರಧಾನಮಂತ್ರಿಗೆ ಪ್ರಧಾನಮಂತ್ರಿಯಾಗಿ, ನಟರಿಗೆ ನಟರಾಗಿ ಸಾಕಷ್ಟು ಪ್ರಭಾವಶಾಲಿಯಾಗಿ ಬೆಳೆದಿದ್ದಾರೆ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆಂದು ಅರುಣಗಿರಿನಾಥಸ್ವಾಮಿಗಳು ಗುಣಗಾನ ಮಾಡಿದರು.
ಹುಚ್ಚೆದ್ದು ಕುಣಿದ ಭಕ್ತರು : ನಿತ್ಯಾನಂದನ ಗುಣಗಾನ ಮಾಡುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹಕ್ಕೆ ಅರುಣಗಿರಿನಾಥಸ್ವಾಮಿಗಳ ಹಾವಭಾವಗಳ ಮೂಲಕ ಎದ್ದೆದ್ದು ಕುಣಿಯುವಂತೆ ಸನ್ನೆ ಮಾಡಿದ್ದರು. 80ರ ಪ್ರಾಯದ ಅರುಣಗಿರಿಸ್ವಾಮಿಗಳು ಆದೇಶ ನೀಡುತ್ತಿದ್ದಂತೆ ಭಕ್ತರು, ತಮ್ಮನ್ನೇ ತಾವು ಮರೆತು ಸುಮಾರು 30 ನಿಮಿಷಗಳ ಕಾಲ ಹುಚ್ಚೆದ್ದು ಕುಣಿದರು.
ನಿತ್ಯಾನಂದನಿಗೆ ಹೊಸಮಠದ ಜವಾಬ್ಧಾರಿಯನ್ನ ವಹಿಸಿಕೊಳ್ಳುವ ಕಾರ್ಯಕ್ರಮದಲ್ಲಿ ನಟಿ ರಂಜಿತಾ ಕೂಡ ಭಾಗಿಯಾಗಿ ನಿತ್ಯಾನಂದ












Click it and Unblock the Notifications