• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬ್ಬಂದಿಯನ್ನು ಹೊರದಬ್ಬುತ್ತಿರುವ HSBC Bank

By Srinath
|
hsbc-bank-sends-employees-packing-hyderabad-pune
ಪುಣೆ, ಏ.27: ಈ ವಾರ HSBC India ತನ್ನ 550 ಉದ್ಯೋಗಿಗಳನ್ನು ಮನೆಗೆ ಕಳಿಸಿದೆ. ಹೈದರಾಬಾದಿನಲ್ಲಿ ವೈಸ್ ಪ್ರೆಸಿಡೆಂಟರ ಸಹಾಯಕ ಮ್ಯಾನೇಜರ್ ಸೇರಿದಂತೆ 200 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಇನ್ನು, ಪುಣೆ ಕೇಂದ್ರದಲ್ಲಿ 350 ಮಂದಿಗೆ ಮನೆಗೆ ಮರಳಿದ್ದಾರೆ. ಒಟ್ಟು 750 ಮಂದಿಯನ್ನು ಕೆಲಸದಿಂದ ತೆಗೆದು ಹಾಕುವ ಉದ್ದೇಶ ಬ್ಯಾಂಕಿಗಿದೆ.

ಮೂರು-ನಾಲ್ಕು ದಿನಗಳಿಂದ ಈ ಉದ್ಯೋಗಿಗಳನ್ನು ಒಬ್ಬೊಬ್ಬರಾಗಿ ಕರೆದು ನೀವೇ ರಾಜೀನಾಮೆ ನೀಡುತ್ತೀರೋ ಅಥವಾ ವಜಾ ಮಡುವುದೋ ಆಯ್ಕೆ ನಿಮ್ಮದು ಎಂದು HR Manager ಯಾವುದೇ ಕನಿಕರವಿಲ್ಲದೆ ಪಿಸುಗುಟ್ಟಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆಯಾಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ವ್ಯವಹಾರ ಚುಕ್ತಾ ಮಾಡಿ, ಸೆಕ್ಯುರಿಟಿ ಗಾರ್ಡುಗಳಿಗೆ ಹೇಳಿ ತಂಡೋಪಾದಿಯಲ್ಲಿ ಒಬ್ಬೊಬ್ಬರನ್ನೇ ಗೇಟಿನಿಂದ ಆಚೆಗೆ ಕಳಿಸುತ್ತಿದ್ದಾರೆ.

'ನನ್ನ computer ಅನ್ನು log off ಮಾಡಿ 10 ನಿಮಿಷದಲ್ಲಿ ಬ್ಯಾಂಕ್ ಕಚೇರಿ ತೊರೆಯುವಂತೆ ಸೂಚಿಸಿದರು. ಚೆನ್ನಾಗಿ ಕೆಲಸ ಮಾಡುತ್ತಿದ್ದವರಿಗೂ ಇದೇ ಗತಿ. ಸಹೋದ್ಯೋಗಿಗಳಿಗೆ ಅಲ್ ವಿದಾ ಹೇಳಲೂ ವಜಾಗೊಂಡವರಿಗೆ ಅವಕಾಶ ನೀಡಿಲ್ಲ. ಅಕ್ಷರಶಃ access cards ಕಿತ್ತುಕೊಂಡು, ಹೊರದಬ್ಬುತ್ತಿದ್ದಾರೆ' ಎಂದು ಒಬ್ಬ ಮ್ಯಾನೇಜರ್ ಅಲವತ್ತುಕೊಂಡಿದ್ದಾರೆ.

ವಜಾಗೊಂಡವರಿಗೆ ಕೆಲಸ ಮಾಡಿದ ಒಂದೊಂದು ವರ್ಷಕ್ಕೆ ತಲಾ ಒಂದೊಂದು ತಿಂಗಳ ಸಂಬಳ ಜತೆಗೆ 3 ತಿಂಗಳ ಸಂಬಂಳ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಹೊಸಬರು ದಿಕ್ಕುಗಾಣದೆ ಗರಬಡಿದಿದ್ದರೆ ಸ್ವಲ್ಪ ಸೀನಿಯರುಗಳು 8-15 ಲಕ್ಷ ರು. ಪ್ಯಾಕೇಜ್ ತೆಗೆದುಕೊಂಡು ಕಚೇರಿಯತ್ತ ಮುಖ ಮಾಡಿ, ಗುಡ್ ಬೈ ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

pink slip ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿಗೆ ಕಂಟಕವಾಗಿದ್ದರೆ ಕೆಳವರ್ಗದ ಸಿಬ್ಬಂದಿ ಬಚಾವ್ ಆಗಿದ್ದಾರೆ. ಹೈದರಾಬಾದಿನಲ್ಲಿ ಎರಡು HSBC global service centres, commercial banking and software development ಕೇಂದ್ರಗಳಿಂದ ಅನೇಕ ನೌಕರರು ವಜಾಗೊಂಡಿದ್ದಾರೆ.

ಕಂಪನಿಯ ಕಾರ್ಪೊರೇಟ್ ಕಚೇರಿಯಲ್ಲೂ ನಾಲ್ಕು ಮಂದಿಯನ್ನು ಕಿತ್ತುಹಾಕಲಾಗಿದ್ದು, ಒಬ್ಬೇ ಒಬ್ಬರನ್ನು ಉಳಿಸಿಕೊಳ್ಳಲಾಗಿದೆ.

ಹಾಂಕಾಂಗ್ ಮತ್ತು ಶಾಂಘೈನಲ್ಲಿ 1865 ರಲ್ಲಿ ಸ್ಥಾಪನೆಗೊಂಡ ಈ ಅಂತಾರಾಷ್ಟ್ರೀಯ ಬ್ಯಾಂಕ್ ಕಂಪನಿ ತನ್ನ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಮತ್ತು ವೆಚ್ಚ ಕಡಿತಗೊಳಿಸಲು ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ. ಕಂಪನಿ ಇನ್ನೊಂದು ವರ್ಷದಲ್ಲಿ ಜಾಗತಿಕವಾಗಿ 3.5 ಶತಕೋಟಿ ಡಾಲರ್ ಉಳಿತಾಯ ಗುರಿ ಹಾಕಿಕೊಂಡಿದೆ.

ಆದರೆ ಭಾರತದಲ್ಲಿ ಹೂಡಿಕೆ ಅಬಾಧಿತವಾಗಿ ನಡೆಯಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಯುರೋಪಿನ ಈ ಅತಿ ದೊಡ್ಡ ಬ್ಯಾಂಕ್ ಕಂಪನಿ, ಬ್ರಿಟನ್ನಿನಲ್ಲೂ ಸದ್ಯದಲ್ಲೇ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೆಲಸದಿಂದ ಕಿತ್ತು ಹಾಕಲು ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ನೇಮಕಾತಿ ಸುದ್ದಿಗಳುView All

English summary
In the few two days, HSBC India has undertaken a massive layoff exercise showing the door to as many as 200 employees ranging from assistant manager to vice presidents from its centres in Hyderabad and over 350 employees at HSBC's Pune centres.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more