ರಿಮೋಟ್ ಗಾಗಿ ವಿದ್ಯಾರ್ಥಿಗಳ ಕಿತ್ತಾಟ, ಕೊಲೆಯಲ್ಲಿ ಅಂತ್ಯ

IPL match, TV remote costs student's life
ಬೆಂಗಳೂರು, ಏ.26: ಟಿವಿ ರಿಮೋಟ್ ಗಾಗಿ ನಡೆದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆಚಾರ್ಯ ಇನ್ಸ್ ಸ್ಟಿಟ್ಯೂಟ್ ನ ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳಿಬ್ಬರು ಐಪಿಎಲ್ ಪಂದ್ಯವಾಳಿ ನೋಡಲು ಕಿತ್ತಾಟ ನಡೆಸಿದ್ದಾರೆ. ರಿಚರ್ಡ್ ಎಂಬ ವಿದ್ಯಾರ್ಥಿಯನ್ನು ಆತನ ಹಾಸ್ಟೆಲ್ ಮೇಟ್ ಹಲ್ಲೆ ಮಾಡಿ ಕೊಂದಿರುವ ಘಟನೆ ನಡೆದಿದೆ.

ಮಣಿಪುರ ಮೂಲದ ರಿಚರ್ಡ್ ಲೊಯತಮ್ ಮಾರಣಾಂತಿಕ ಹಲ್ಲೆಗೊಳಗಾಗಿ ನಂತರ, cerebral haemorrhageಗೆ ಒಳಗಾಗಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.

ರಿಚರ್ಡ್ ಮುಖ, ತಲೆ, ಹಣೆ ಮೇಲೆ ತೀವ್ರ ಗಾಯಗಳಾಗಿತ್ತು. ಹಾಸ್ಟೆಲ್ ವಾರ್ಡನ್ ಗೆ ವಿಷ್ಯ ತಿಳಿಸದೆ ರಿಚರ್ಡ್ ಹಾಗೆ ಮಲಗಿಬಿಟ್ಟ ಮತ್ತೆ ಏಳಲೇ ಇಲ್ಲ ಎಂದು ರಿಚರ್ಡ್ ಗೆಳೆಯ ಸೈಯದ್ ರಾಜಾ ಹೇಳಿದ್ದಾರೆ.

ಸುಮಾರು 8 ಗಂಟೆಗೆ ಆರಂಭವಾದ ಕಿತ್ತಾಟ ರಾತ್ರಿ 10.30ರ ತನಕ ನಡೆದಿತ್ತು ಎನ್ನಲಾಗಿದೆ. ಇವರಿಬ್ಬರ ಗಲಾಟೆ ಬಗ್ಗೆ ವಾರ್ಡನ್ ನಿರ್ಲಕ್ಷ್ಯ ತೋರಿಸಿದ್ದು ಏಕೆ? ಕೂಡಲೇ ಆಸ್ಪತ್ರೆಗೆ ಏಕೆ ಕರೆದೊಯ್ಯಲಿಲ್ಲ. ನನ್ನ ಮಗನನ್ನು ಅನ್ಯಾಯವಾಗಿ ಕೊಂದಿದ್ದಾರೆ ಎಂದು ರಿಚರ್ಡ್ ಪೋಷಕರು ಆರೋಪಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಡೀನ್ ವಸಂತ್, ಇಬ್ಬರು ವಿದ್ಯಾರ್ಥಿಗಳು ಜಗಳವಾಡುವುದರ ಬಗ್ಗೆ ಆಗಾಗ ದೂರುಗಳು ಬರುತ್ತಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ಸಿಗಲೇಬೇಕು. ಈ ರೀತಿ ಅನಾಹುತ ನಡೆಯಬಾರದಿತ್ತು ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ನಗರ ಪೊಲೀಸರು ತನಿಖೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+