ಕೆಆರ್ ಪುರಂನಲ್ಲಿ ಟೆಕ್ಕಿಯ ಪತ್ನಿ ಆತ್ಮಹತ್ಯೆ

ವಿಷ ಸೇವಿಸಿದ್ದ ಶ್ರವಂತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶ್ರವಂತಿ ಮಂಗಳವಾರ ಸಾವನ್ನಪ್ಪಿದರು ಎಂದು ಕೆ.ಆರ್.ಪುರ ಪೊಲೀಸರು ತಿಳಿಸಿದ್ದಾರೆ. ಶ್ರವಂತಿ ಬಿಕಾಂ ಓದಿದ್ದರು. ಇವರ ಮದುವೆಯಾಗಿ ನಾಲ್ಕು ವರ್ಷವಾಗಿತ್ತು. ದಂಪತಿಗೆ ಹರ್ಷವರ್ಧನ ಎಂಬ 11 ತಿಂಗಳ ಮಗುವಿದೆ.
ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ವಿಷ್ಣುವರ್ಧನ ಅವರು ತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ಅವರು, ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
'ಅಳಿಯ ಮತ್ತು ಆತನ ಪೋಷಕರು ವರದಕ್ಷಿಣೆ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ಅಳಿಯ ಮತ್ತು ಆತನ ಕುಟುಂಬ ಸದಸ್ಯರೇ ಕಾರಣ' ಎಂದು ಶ್ರವಂತಿ ತಂದೆ ದಳಪತಿ ಅವರು ದೂರು ಕೊಟ್ಟಿದ್ದಾರೆ.












Click it and Unblock the Notifications