ಜಗನ್-ರೆಡ್ಡಿ ಪ್ರಕರಣ: ಸಿಬಿಐ ಮುಗುಳ್ನಗೆ
ಹೈದರಾಬಾದ್,
ಏ.21: ಅಕ್ರಮ ಆಸ್ತಿ ಪ್ರಕರಣ ಸಂಬಂಧ ವೈ.ಎಸ್. ಜಗನ್‌ಮೋಹನ ರೆಡ್ಡಿ ಅವರ ಸಹಾಯಕ, ಪ್ರಕರಣದ 2ನೇ ಆರೋಪಿ ವಿಜಯ್ ಸಾಯಿ ರೆಡ್ಡಿಗೆ ಸಿಬಿಐ ವಿಶೇಷಕೋರ್ಟ್ ನೀಡಿದ್ದ ಜಾಮೀನನ್ನು ಆಂಧ್ರ ಹೈಕೋರ್ಟ್ ಶುಕ್ರವಾರ ರದ್ದು ಮಾಡಿದೆ. ಇದರಿಂದ ಸಾಯಿರೆಡ್ಡಿ ಸೋಮವಾರ ಕೋರ್ಟಿಗೆ ಶರಣಾಗಬೇಕಿದೆ. id="toptextpromo">ಏಪ್ರಿಲ್
13ರಂದು ಖುದ್ದು ಸಿಬಿಐ ನ್ಯಾಯಾಲಯವೇ ಸಾಯಿ ರೆಡ್ಡಿಗೆ ಜಾಮೀನು ನೀಡಿ, ಬಿಡುಗಡೆಗೊಳಿಸಿತ್ತು. ಪ್ರಕರಣದಲ್ಲಿ ಬೇರೆ ಯಾರನ್ನೂ ಬಂಧಿಸದಿರುವಾಗ ಇವರೊಬ್ಬರನ್ನೇ ಏಕೆ ಬಂಧಿಸಿದಿರಿ ಎಂಬುದು ಆ ಕೆಳ ನ್ಯಾಯಾಲಯವು ಸಿಬಿಐಅನ್ನು ಪ್ರಶ್ನಿಸಿ, ಜಾಮೀನು ನೀಡಿತ್ತು. id='are-slot-1' class='oiad oi-axt oiadv'> id='top-searched-articles'>ಆದರೆ
ಹೈಕೋರ್ಟ್ ಈ ವಾದವನ್ನು ಸುತರಾಂ ಒಪ್ಪಲಿಲ್ಲ. ಹೀಗಾಗಿ, ವಿಜಯ್ ಸಾಯಿ ರೆಡ್ಡಿ ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯದೆದುರು ಹಾಜರಾಗಿ, ಜಾಮೀನು ಅರ್ಜಿ ಮರುವಿಚಾರಣೆಗೊಳಗಾಗಬೇಕಿದೆ. ಸಾಯಿರೆಡ್ಡಿಗೆ ಜಾಮೀನು ನೀಡುವುದರಿಂದ ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂದು ಸಿಬಿಐ, ಹೈಕೋರ್ಟಿಗೆ ಅಲವತ್ತುಕೊಂಡಿತ್ತು.











Click it and Unblock the Notifications