ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪನನ್ನು ಯಾಕೆ ಮತ್ತೆ ಸಿಎಂ ಮಾಡಬೇಕು

By Prasad
|
Google Oneindia Kannada News

Why BSY should be made CM again
ಬಿಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪಟ್ಟದಿಂದ ಬಲವಂತವಾಗಿ ಕೆಳಗಿಳಿಸಿದ ಘಳಿಗೆಯಿಂದ ಸ್ಫೋಟಕ್ಕೆ ಸಿದ್ಧವಾಗಿರುವ ಜ್ವಾಲಾಮುಖಿಯನ್ನು ಬುಡದಲ್ಲಿ ಇಟ್ಟುಕೊಂಡೇ ಬಿಜೆಪಿ ಸರಕಾರ ಕರ್ನಾಟಕದಲ್ಲಿ ರಾಜ್ಯಭಾರ ಮಾಡುತ್ತಿದೆ. ಈ ಅಧಿಕಾರದ ಹಗ್ಗಜಗ್ಗಾಟ ಪಕ್ಷಕ್ಕೆ ಮಾತ್ರವಲ್ಲ ರಾಜ್ಯದ ಆಡಳಿತದ ಮೇಲೆಯೂ ಭಾರೀ ಹೊಡೆತ ಕೊಟ್ಟಿದೆ.

ವಿಧಾನಸಭೆ ಚುನಾವಣೆಗೆ ಇನ್ನೇನು ಒಂದು ವರ್ಷ ಮಾತ್ರ ಬಾಕಿ ಉಳಿದಿದೆ. ಆದರೂ ವಗ್ಗರಣೆಯಲ್ಲಿ ಹಾಕಿದ ಸಾಸಿವೆಯಂತೆ ಚಟಪಡಿಸುತ್ತಿರುವ ಭಿನ್ನಮತವನ್ನು ಇನ್ನೂ ಶಮನಗೊಳಿಸಲು ಬಿಜೆಪಿ ಹೈಕಮಾಂಡಿಗೆ ಇನ್ನೂ ಸಾಧ್ಯವಾಗಿಲ್ಲ. ಭಿನ್ನಮತಕ್ಕೆ ಹೈಹಾಕಿದಾಗಲೆಲ್ಲ ಇನ್ನೂ ಉಲ್ಬಣಗೊಳ್ಳುತ್ತಿದೆ ಮತ್ತು ಯಾವುದೇ ದೃಢ ನಿರ್ಧಾರಕ್ಕೆ ಬರಲು ವಿಫಲವಾಗಿ, ತಟಸ್ಥವಾಗಿರುವುದು ಆ ಭಿನ್ನಮತಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗುತ್ತಿದೆ.

ಎಂಥದೇ ಬಿಕ್ಕಟ್ಟು ಉದ್ಭವಿಸಿದಾಗ ಏನನ್ನೂ ಮಾಡದೆ ಸುಮ್ಮನಿರುವುದು ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರು ಕಂಡುಕೊಂಡಿದ್ದ ಅಸ್ತ್ರ. ಆ ಅಸ್ತ್ರವನ್ನು ಅವರು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಪ್ರಯೋಗಿಸುತ್ತಿದ್ದರು. ಇಂಥ ಅಸ್ತ್ರವೇ ಬಿಜೆಪಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಏನೂ ಮಾಡದೆ ಸುಮ್ಮನಿದ್ದುದಕ್ಕೆ ಕಳೆದ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಏನಾಯಿತೆಂಬ ನಿದರ್ಶನ ನಮ್ಮ ಕಣ್ಣಮುಂದೆಯೇ ಇದೆ. ಚುನಾವಣೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಅಧಿಕಾರ ಕಬಳಿಸಿಬಿಟ್ಟಿತು.

ಇಂಥದೇ ಸಂದರ್ಭ ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿದೆ. ಯಡಿಯೂರಪ್ಪನವರನ್ನು ಕೂಡಿಸಬೇಕೋ, ಸದಾನಂದ ಗೌಡರನ್ನು ಉಳಿಸಬೇಕೋ ಎಂದು ನಿರ್ಧರಿಸುವ ಹೊತ್ತಿಗೆ ವಿರೋಧ ಪಕ್ಷ ಅಧಿಕಾರ ಗದ್ದುಗೆ ಕಿತ್ತುಕೊಂಡು ಹೋಗಿರತ್ತೆ, ಬಿಜೆಪಿ ಮುಖ ಬಿಳಿಚಿಕೊಂಡು ಕುಳಿತಿರಬೇಕಾಗುತ್ತದೆ. ಸಂದರ್ಭ ಈ ರೀತಿಯಿರುವಾಗ, ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪನವರೇ ಯಾಕೆ ಸಮರ್ಥ ವ್ಯಕ್ತಿ, ಸದಾನಂದ ಗೌಡರನ್ನು ಪಟ್ಟದಿಂದ ಕೆಳಗಿಳಿಸಲು ಸಮಯ ಯಾಕೆ ಸೂಕ್ತ ಎಂಬುದನ್ನು ಸ್ವಪನ್ ದಾಸ್‌ಗುಪ್ತಾ ಇಲ್ಲಿ ವಿಶ್ಲೇಷಿಸಿದ್ದಾರೆ. ಪೂರ್ತಿ ಲೇಖನ ಇಲ್ಲಿ ಓದಿರಿ.

English summary
Ever since BS Yeddyurappa was removed from Chief Minister post, Karnataka BJP has been ruling the state sitting on the tip of volcano. BJP high commands in-activenes in finding amicable solution to the crisis may prove fatal in the coming election to assembly, writes Swapan Dasgupta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X