ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ತೀರ್ಪು ಬಂದಿಲ್ಲ, ಯಡ್ಡಿ ಹಿಂದೆ ನಿಂತ ಸದಾ

By Mahesh
|
Google Oneindia Kannada News

CM DV Sadananda Gowda
ಬೆಂಗಳೂರು, ಏ.20: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪ ಸಾಬೀತಾಗಿದೆ. ಸಿಬಿಐ ಮಟ್ಟದ ಉನ್ನತ ಏಜೆನ್ಸಿ ಮೂಲಕ ತನಿಖೆ ನಡೆಸಬಹುದು ಎಂದು ಸಿಇಸಿ ಸಲ್ಲಿಸಿರುವ ವರದಿಯನ್ನು ಸುಪ್ರೀಂಕೋರ್ಟ್ ಪರಿಶೀಲಿಸುತ್ತಿದೆ. ಈ ಮಧ್ಯೆ ಈ ಬಗ್ಗೆ ಯಡಿಯೂರಪ್ಪ ಅವರು ಏನು ಪ್ರತಿಕ್ರಿಯೆ ನೀಡಿದರೋ ಅದನ್ನೆ ಡಿವಿ ಸದಾನಂದ ಗೌಡರು ಯಥಾವತ್ತಾಗಿ ಹೇಳಿದ್ದು ವಿಶೇಷವಾಗಿತ್ತು.

'CEC ವರದಿ ಅಂತಿಮವಲ್ಲ. ವರದಿಯನ್ನು ಒಪ್ಪುವುದು, ಬಿಡುವುದು ಸುಪ್ರೀಂಕೋರ್ಟ್ ವಿವೇಚನೆಗೆ ಬಿಟ್ಟ ವಿಷಯ. ಒಂದು ವೇಳೆ ತನಿಖೆ ನಡೆದು, ಆರೋಪ ಸಾಬೀತಾದರೆ ಮಾತ್ರ ನಾನು ಸಂಕಷ್ಟಕ್ಕೆ ಸಿಲುಕಬಹುದು' ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದರು.

ನಂತರ ಸಿಇಸಿ ವರದಿ ಸಲ್ಲಿಕೆ, ಸುಪ್ರೀಂಕೋರ್ಟ್ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಕೂಡಾ ಯಡಿಯೂರಪ್ಪ ಅವರಿಗೆ ಪೂರಕವಾಗೇ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಉನ್ನತಾಧಿಕಾರ ಸಮಿತಿ (CEC)ಗೆ ಶಿಫಾರಸು ಮಾಡಲು ಮಾತ್ರ ಅಧಿಕಾರವಿದೆ. ಅದೇ ಅಂತಿಮವಲ್ಲ. ಸಿಬಿಐ ಅಥವಾ ಇನ್ಯಾವುದೇ ಸಂಸ್ಥೆ ತನಿಖೆಗೆ ಶಿಫಾರಸು ಮಾಡಿದ ತಕ್ಷಣ ಯಡಿಯೂರಪ್ಪ ಅವರನ್ನು ಅಪರಾಧಿ ಎನ್ನಲಾಗುವುದಿಲ್ಲ. ಸುಪ್ರೀಂಕೋರ್ಟ್ ಈ ಬಗ್ಗೆ ಸೂಕ್ತ ಆದೇಶ ನೀಡುತ್ತದೆ ಎಂದು ನಂಬಿದ್ದೇವೆ. ಕೋರ್ಟ್ ನೀಡುವ ನಿರ್ಣಯದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಡಿವಿ ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.

ಸಿಇಸಿ ಶಿಫಾರಸ್ಸು ಮುಖ್ಯ: ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸುಪ್ರೀಂಕೋರ್ಟ್ ಸಿಇಸಿ ಶಿಫಾರಸುಗಳನ್ನು ನಿರಾಕರಿಸಲಾಗುವುದಿಲ್ಲವಾದ್ದರಿಂದ ಯಡ್ಡಿ ಕುಟುಂಬದ ಪ್ರೇರಣಾ ಟ್ರಸ್ಟ್ ಜಿಂದಾಲ್ ಕಂಪನಿಯಿಂದ 20 ಪ್ಲಸ್ ಕೋಟಿ ಪಡೆದಿರುವ ಪ್ರಕರಣದಲ್ಲಿ ನಮ್ಮ ಕಕ್ಷಿದಾರ ಎಸ್ ಆರ್ ಹಿರೇಮಠ್ ಅವರ ಎನ್‌ಸಿಎನ್‌ಪಿಆರ್ ಸಂಘಟನೆ 314 ಪುಟಗಳ ವರದಿಯನ್ನು ಸಲ್ಲಿಸಿದೆ ಗೆಲುವು ನಮಗೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಪ್ರೇರಣಾ ಟ್ರಸ್ಟ್ ಹಣ ಪಡೆದಿದ್ದು ನಿಜವಾರೂ ಅದು ಲಂಚವಲ್ಲ ಎಂದು ಯಡಿಯೂರಪ್ಪ ಪರ ವಕೀಲ ಸೊಲಿ ಸೊರಾಬ್ಜಿ ವಾದಿಸಿದ್ದಾರೆ.

English summary
CM Sadananda Gowda repeated BS Yeddyurappa's reaction and said SC is yet to give verdict on irregularities in illegal mining and CEC has only recommended a probe by CBI like agencies. Now it is upto SC to give verdict and Karnataka government will follow the instruction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X